ಮಲೇಬೆನ್ನೂರು, ನ.19- ಪಟ್ಟಣದ ವಿವಿಧೆಡೆ ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸರ 537ನೇ ಜಯಂತಿ ಕಾರ್ಯಕ್ರಮಗಳನ್ನು ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಪ್ರಭಾರಿ ಅಧ್ಯಕ್ಷೆ ಶ್ರೀಮತಿ ನಪ್ಸೀಯಾ ಬಾನು ಚಮನ್ ಷಾ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಮಂಜುನಾಥ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ ಪಟೇಲ್, ಪಿಎಸಿಎಸ್ ಅಧ್ಯಕ್ಷ ಯುನೂಸ್, ಪುರಸಭೆ ಸದಸ್ಯರಾದ ಕೆ.ಜಿ. ಲೋಕೇಶ್, ಖಲೀಲ್, ನಯಾಜ್, ದಾದಾಪೀರ್, ಶಬ್ಬೀರ್ ಖಾನ್, ಗೌಡ್ರು ಮಂಜಣ್ಣ, ಸಾಬೀರ್ ಅಲಿ, ಟಿ. ಹನುಮಂತಪ್ಪ, ಷಾ ಅಬ್ರಾರ್, ಕೆ.ಪಿ. ಗಂಗಾಧರ್, ಬಿ. ಸುರೇಶ್, ಪಿ.ಆರ್. ರಾಜು, ಭೋವಿ ಕುಮಾರ್, ಯುಸೂಫ್, ಎಂ.ಬಿ. ರುಸ್ತುಂ, ಬಿ. ರಫೀಕ್ ಸಾಬ್, ಬಸವರಾಜ್ ದೊಡ್ಮನಿ, ಬಿ. ಸೈಫುಲ್ಲಾ, ಸಿ. ಅಬ್ದುಲ್ ಹಾದಿ, ಪಿ.ಆರ್. ಕುಮಾರ್, ಪಿ.ಹೆಚ್. ಶಿವಕುಮಾರ್, ಪೂಜಾರ್ ನಾರಾ ಯಣಪ್ಪ ಹಾಗೂ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ನಾಡ ಕಛೇರಿಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಷರೀಫ್, ಶ್ರೀಧರ್ ಮತ್ತಿತರರು ಭಾಗವಹಿಸಿದ್ದರು.
ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕನಕದಾಸರ ಬೃಹತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ,
ವಿಶೇಷ ಪೂಜೆ ಸಲ್ಲಿಸಲಾಯಿತು. ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಪೂಜಾರ್ ಗಂಗೇನಳ್ಯೆಪ್ಪ, ಪೂಜಾರ್ ರೇವಣಪ್ಪ, ಪೂಜಾರ್ ನಾಗಪ್ಪ, ಪಿ. ನಾಗೇಂದ್ರಪ್ಪ, ಬಿ. ಬೀರೇಶ್, ಬಿ. ಮುರುಗೆಪ್ಪ, ಬಿ. ಹಾಲೇಶ್ ಮತ್ತು ಪ್ರಕಾಶ್ ಭಾಗವಹಿಸಿದ್ದರು.