ರಾಜ್ಯ ಗ್ರಾಮ ಪಂಚಾಯಿತಿ ನೌಕರರಿಂದ ಪ್ರತಿಭಟನೆ

ರಾಜ್ಯ ಗ್ರಾಮ ಪಂಚಾಯಿತಿ ನೌಕರರಿಂದ ಪ್ರತಿಭಟನೆ

ಜಗಳೂರು, 19 – ವಿವಿಧ ಬೇಡಿಕೆಗಳ ಈಡೇರಿಕೆ ಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ಸಂಯೋಜಿತ ತಾ. ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರ ಮೆರವಣಿಗೆ ಘೋಷಣೆ ಕೂಗುತ್ತಾ, ಮಹಾತ್ಮಗಾಂಧಿ ವೃತ್ತ, ದಾವಣಗೆರೆ ರಸ್ತೆ ಅಂಬೇಡ್ಕರ್ ವೃತ್ತದ ಮೂಲಕ ತಾಲ್ಲೂಕು ಪಂಚಾಯಿತಿ ಮುಂಭಾಗ ಜಮಾಯಿಸಿ ತಾ.ಪಂ.ಇಓ.ಕೆಂಚಪ್ಪ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾ ಪ್ರಧಾನಕಾರ್ಯದರ್ಶಿ ಜಿ.ಎಸ್.ಬಸವರಾಜ್ ಮಾತನಾಡಿ, 2017 ಅಕ್ಟೋಬರ್ 31ರ ಪೂರ್ವದ ನೌಕರರಿಗೆ ಅನುಮೋದನೆ ನೀಡಬೇಕು. ಅನುಕಂಪದ ಮೇಲೆ ಮರಣ ಹೊಂದಿದ ಕುಟುಂಬದ ಸದಸ್ಯರಿಗೆ ಗ್ರಾಮಪಂಚಾಯಿತಿ ಸದರಿ ಹುದ್ದೆಯನ್ನು ನೀಡಬೇಕು. ವೇತನ ಬಾಕಿ, ಇಎಸ್‌ಐ, ಪಿಎಫ್, ವಿಮೆ ಮಾಡಿಸಬೇಕು. ವಾಟರ್ ಮ್ಯಾನ್, ಸ್ವಚ್ಛತಾಗಾರರಿಗೆ ಮೊಬೈಲ್ ಆಪ್ ಮುಖಾಂತರ ಹಾಜರಾತಿ ಕಡ್ಡಾಯಗೊಳಿಸಬೇಕು‌. ನೌಕರರ ವೇತನವನ್ನು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಮಹಾಂತೇಶ್ ಸಿದ್ದಮ್ಮನಹಳ್ಳಿ, ಉಪಾಧ್ಯಕ್ಷ ಜಯರಾಮಪ್ಪ, ಉಪಕಾರ್ಯದರ್ಶಿ ಹಾಲೇಶ್, ಗೌರವ ಅಧ್ಯಕ್ಷ ಕೃಷ್ಣ, ಪದಾಧಿಕಾರಿ ಕುಮಾರ್, ಸಂಚಾಲಕ ಆನಂದರಾಜ್, ನಾಗರಾಜ್, ರಾಮಸ್ವಾಮಿ ಇದ್ದರು.

error: Content is protected !!