ಜಗಳೂರಿನ ಕಾರ್ಯಕ್ರಮದಲ್ಲಿ ಶಾಸಕ ಬಿ. ದೇವೇಂದ್ರಪ್ಪ
ಜಗಳೂರು,ನ.18- ರೈತರ ಅಭಿವೃದ್ಧಿಗೆ ಪರೋಕ್ಷವಾಗಿ ದುಡಿಯುವ ಮತ್ತು ಬೆಳಕು ನೀಡುವಂತಹ ಕೆಲಸ ಮಾಡುವ ಬೆಸ್ಕಾಂ ಸಿಬ್ಬಂದಿ ಕಾರ್ಯ ಶ್ಲ್ಯಾಘನೀಯ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಬೆಸ್ಕಾಂ ಇಲಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಆಗಸ್ಟ್ನಲ್ಲಿ 1 ಕೋಟಿ 10 ಲಕ್ಷ ರೂ. ವೆಚ್ಚದಲ್ಲಿ ಬೆಸ್ಕಾಂ ಇಲಾಖೆಯ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡಲು ಭೂಮಿ ಪೂಜೆ ಮಾಡಲಾಗಿತ್ತು. ಕೇವಲ 6 ತಿಂಗಳಲ್ಲಿ ಕಟ್ಟಡ ಪೂರ್ಣಗೊಳಿಸಿದ್ದು, ಕಟ್ಟಡವು ಸಹ ಗುಣಮಟ್ಟದಿಂದ ಕೂಡಿದೆ ಎಂದರು.
ಪಂಪ್ಸೆಟ್ಗಳಿಗೆ ವಿದ್ಯುತ್ ನೀಡುವು ದರ ಮೂಲಕ ರೈತರ ಬದುಕನ್ನು ಕಟ್ಟಿಕೊ ಡುವಂತಹ ಕೆಲಸವನ್ನು ಇಲಾಖೆಯವರು ಮಾಡುತ್ತಿದ್ದಾರೆ. ಆದರೂ ಸಹ ರೈತರು ಕೆಲವು ಬಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಪ್ರಸಂಗಗಳು ಸಹ ನಡೆದಿವೆ. ಜನ ಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದರೂ ಸಹ ನಿಷ್ಟೂರವಾದಿಗಳಾ ಗಬೇಕಾಗುತ್ತದೆ ಎಂದು ಹೇಳಿದರು.
ಬೆಸ್ಕಾಂ ಎಇಇ ಸುಧಾಮಣಿ ಮಾತನಾಡಿ, ಬೆಸ್ಕಾಂ ಎಂದರೆ ಶಕ್ತಿ ಮತ್ತು ಬೆಳಕು. ಕೆಇಬಿ ಇದ್ದದ್ದು ಕರ್ನಾಟಕ ಪವರ್ ಸ್ಟೇಷನ್ ಆಯಿತು. ನಂತರ 2002 ರಲ್ಲಿ 5 ವಿದ್ಯುತ್ ಕಂಪನಿಗಳಾಗುತ್ತವೆ. ಅದರ ಭಾಗವಾಗಿ ನಾವು ಕೆಲಸ ಮಾಡುತ್ತಿದ್ದು, ತಾಲ್ಲೂಕಿನಲ್ಲಿ 5 ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನೂತನ ಕಟ್ಟಡವು ವಿಶಾಲವಾಗಿದ್ದು, ನಾಗರಿಕರ ಕೆಲಸ, ಕಾರ್ಯ ಗಳಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್, ಬೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಕಾರ್ಯ ಮತ್ತು ಪಾಲನಾ ವಿಭಾಗದ ಎ.ಕೆ.ತಿಪ್ಪೇಸ್ವಾಮಿ, ಪ.ಪಂ. ಸದಸ್ಯರಾದ ಸಿದ್ದಪ್ಪ, ನಿರ್ಮಲ ಕುಮಾರಿ, ರಮೇಶ್, ಮಹಮದ್ ಅಲಿ, ಲಲಿತಮ್ಮ, ನಾಮ ನಿರ್ದೇಶನ ಸದಸ್ಯರಾದ ಶಾಂತಕುಮಾರ್, ಕುರಿ ಜಯ್ಯಣ್ಣ. ಶಾಂತ ಕುಮಾರ್ ಕಚೇರಿ ಸಿಬ್ಬಂದಿ ವರ್ಗದವರು ಸೇರಿದಂತೆ, ಮತ್ತಿತರರು ಹಾಜರಿದ್ದರು.