ಪಾದಚಾರಿ ರಸ್ತೆ ಆಕ್ರಮಣ ತೆರವು

ಪಾದಚಾರಿ ರಸ್ತೆ ಆಕ್ರಮಣ ತೆರವು

ಹರಿಹರ, ನ.18- ನಗರದ ಗಾಂಧಿ ವೃತ್ತದಲ್ಲಿರುವ ಐಡಿ ಎಸ್.ಡಿ.ಎಂ.ಟಿ. ಕಟ್ಟಡ ಮುಂಭಾಗದ ಪಾದಚಾರಿ ರಸ್ತೆಯನ್ನು ಆಕ್ರಮಿಸಿಕೊಂಡಿದ್ದ ವ್ಯಾಪಾರಸ್ಥರನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ಅನುಕೂಲ ಕಲ್ಪಿಸಿದರು.

ಈ ಕುರಿತು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ನಗರಸಭೆಯ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಉಪಾಧ್ಯಕ್ಷ ಗುತ್ತೂರು ಜಂಬಣ್ಣ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯ ಪ್ರವೃತ್ತರಾದರು.

ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ಇಲಾಖೆಯ ರವಿ ಪ್ರಕಾಶ್, ಸಂತೋಷ ಹಾಗೂ ನಗರ ಸಭೆ ಸಿಬ್ಬಂದಿ ಇದ್ದರು.

error: Content is protected !!