ನಗರದಲ್ಲಿ ಇಂದು ಮನೆ ಅಂಗಳದಲ್ಲಿ ಶರಣ ಸಂಗಮ, ದತ್ತಿ ಕಾರ್ಯಕ್ರಮ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಮನೆ ಅಂಗಳದಲ್ಲಿ ಶರಣ ಸಂಗಮ ದತ್ತಿ (ಲಿ. ಶರಣೆ ಗೌಡಪ್ಳ ಗಂಗಮ್ಮ, ಲಿಂ. ಶರಣ ಗೌಡಪ್ಳ ಹನುಮಪ್ಪ ಶಾಮನೂರು ದಾನಿಗಳು ಶರಣ ಗೌಡಪ್ಳ ಬಸವರಾಜಪ್ಪ ಶಾಮನೂರು)ಕಾರ್ಯಕ್ರಮವು ಇಂದು ಬೆಳಿಗ್ಗೆ 11 ಗಂಟೆಗೆ ಆಂಜನೇಯ ಬಡಾವಣೆಯ ಶ್ರೀ ಬಸವಾನಂದ ನಿಲಯದಲ್ಲಿ ನಡೆಯಲಿದೆ. ಜಿಲ್ಲಾ ಶ.ಸಾ.ಪ. ನಿಕಟಪೂರ್ವ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಕಾರ್ಯಕ್ರಮದ ಅಧ್ಯ ಕ್ಷತೆ ವಹಿಸಲಿದ್ದಾರೆ. ಅಧ್ಯಕ್ಷ ಕೆ.ಬಿ. ಪರಮೇ ಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುಮತಿ ಜಯ್ಯಪ್ಪ ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕುರಿತು ಅನುಭಾವ ನುಡಿಗಳನ್ನಾಡಲಿದ್ದಾರೆ.

error: Content is protected !!