ದಾವಣಗೆರೆ, ನ.17- ನಿನ್ನೆ ನಡೆದ ಜಿಲ್ಲಾ ಸರ್ಕಾರಿ ನೌಕರರ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಶಿವಾನಂದ ದಳವಾಯಿ ಗುಂಪಿನ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಎಚ್.ಕೆ.ಆರ್. ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಅರುಣಾದೇವಿ ಎ.ಡಿ. 125 ಮತ ಪಡೆದಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ ರಾಮಗೊಂಡನಹಳ್ಳಿ ಆರೋಗ್ಯ ನಿರೀಕ್ಷಣಾಧಿಕಾರಿ ಶಶಿಧರ್ ಬಿ.ಎನ್ 175 ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿಯಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ ಅಜಾದ್ ನಗರ ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಸುಧಾ ಬಿ. 124 ಮತಗಳನ್ನು ಪಡೆದು ದಳವಾಯಿ ಗುಂಪಿನಿಂದ ಜಯಶಾಲಿಯಾಗಿದ್ದಾರೆ ಎಂದು ಶಿವಾನಂದ ದಳವಾಯಿ ತಿಳಿಸಿದ್ದಾರೆ.