ಮಲೇಬೆನ್ನೂರು, ನ.15- ಮಲೇಬೆನ್ನೂರು ಹೋಬಳಿಯ ಕೊಮಾರನಹಳ್ಳಿ, ದಿಬ್ಬದಹಳ್ಳಿ, ಕೊಪ್ಪ ಮತ್ತು ಕೊಕ್ಕನೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಬಗರ್ಹುಕ್ಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಶುಕ್ರವಾರ ಮಲೇಬೆನ್ನೂರಿನಲ್ಲಿ ರೈತ ಸಂಘದಿಂದ ಉಪತಹಶೀಲ್ದಾರ್ ಆರ್. ರವಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಕಂದಾಯ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಳೆದ 25-30 ವರ್ಷಗಳಿಂದ ನೂರಾರು ರೈತರು ಸರ್ಕಾರಿ ಗೋಮಾಳ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಈ ಹಿಂದಿನ ಸರ್ಕಾರದ ಆದೇಶಗಳ ಪ್ರಕಾರ ಉಳುಮೆ ಮಾಡುತ್ತಿರುವ ರೈತರಿಗೆ ಬಗರ್ಹುಕ್ಕುಂ ಸಾಗುವಳಿ ಹಕ್ಕು ಪತ್ರ ನೀಡಬೇಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದುವರೆಗೂ ಸಾಗುವಳಿ ಹಕ್ಕು ಪತ್ರ ನೀಡಿಲ್ಲ. ಈ ಬಗ್ಗೆ ನಾವು ಸಾಕಷ್ಟು ಬಾರಿ ರೈತರೊಂದಿಗೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋ ಜನ ಆಗಿಲ್ಲ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮತ್ತು ದಾವಣಗೆರೆ ಕಾರ್ಯದರ್ಶಿ ಕೋಗಳಿ ಮಂಜುನಾಥ್ ದೂರಿ ದ್ದಾರೆ. ಹಾಲಿವಾಣದ ಎಸ್. ರೇವಣಪ್ಪ, ಫೈಜುಲ್ಲಾ, ದೇವೇಂದ್ರಪ್ಪ, ಆರ್. ಮಂಜುನಾಥ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.