`ಬಿಲ್ಡ್‌ಮ್ಯಾಟ್’ ಕಟ್ಟಡ ಸಾಮಗ್ರಿಗಳ ವಸ್ತುಪ್ರದರ್ಶನಕ್ಕೆ ಎಸ್ಸೆಸ್ ಚಾಲನೆ

`ಬಿಲ್ಡ್‌ಮ್ಯಾಟ್’ ಕಟ್ಟಡ ಸಾಮಗ್ರಿಗಳ ವಸ್ತುಪ್ರದರ್ಶನಕ್ಕೆ ಎಸ್ಸೆಸ್ ಚಾಲನೆ

ದಾವಣಗೆರೆ, ನ. 15- ಪೋರಂ ಆಫ್ ಪ್ರಾಕ್ಟೀಸಿಂಗ್ ಆರ್ಕಿಟೆಕ್ಟ್ ಸಿವಿಲ್ ಇಂಜಿನಿಯರ್ ಮತ್ತು ಬೆಂಗಳೂರಿನ ಯುಎಸ್ ಕಮ್ಯುನಿಕೇಷನ್ ಸಂಯುಕ್ತಾಶ್ರಯದಲ್ಲಿ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ `ಬಿಲ್ಡ್ ಮ್ಯಾಟ್- ಎಕ್ಸ್‌ಪೋ’ ಕಟ್ಟಡ ಸಾಮಗ್ರಿಗಳ ಇಂಟೀರಿಯರ್, ಎಕ್ಸ್‌ಟೀರಿಯರ್ ಗೃಹಾಲಂಕಾರ ಮತ್ತು ಫರ್ನಿಚರ್ಸ್ ವಸ್ತು ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮಕ್ಕೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.

ಇಂದು ಆರಂಭಗೊಂಡ `ಬಿಲ್ಡ್‌ಮ್ಯಾಟ್’ ಪ್ರದರ್ಶನ ಮತ್ತು ಮಾರಾಟವು ನಾಡಿದ್ದು ದಿನಾಂಕ 17 ರವರೆೆಗೆ ನಡೆಯಲಿದ್ದು, ಪ್ರದರ್ಶನದಲ್ಲಿ 90 ಮಳಿಗೆಗಳಲ್ಲಿ ಆಧುನಿಕ ನವೀಕೃತ ಕಟ್ಟಡ ಸಾಮಗ್ರಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಒಂದೇ ಸೂರಿನಡಿ ಮನೆ ಸೇರಿದಂತೆ ಇತರೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಪ್ಲೇವುಡ್, ಜಲ್ಲಿ ಕಲ್ಲು, ಬಣ್ಣ, ಮಾರ್ಬಲ್ಸ್, ಕಬ್ಬಿಣ, ಸಿಮೆಂಟ್, ಆತ್ಯಾಕರ್ಷಕ ಬಾಗಿಲು, ಕಿಟಕಿ, ಅಲ್ಯೂಮಿನಿಯಂ ಕಾಂಪೋಜಿಟ್ ಪ್ಯಾನೆಲ್, ಸೋಲಾರ್ ವಿದ್ಯುತ್ ಉಪಕರಣಗಳು, ಅತ್ಯಾಧುನಿಕ ರೂಫಿಂಗ್, ಟೈಲ್ಸ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಮನೆ ಕಟ್ಟಲು ಅಗತ್ಯ ಸಾಲ ಸೌಲಭ್ಯಗಳ ಬಗ್ಗೆ ಕೆಲವು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಸಾಲ ನೀಡಿಕೆ ಬಗ್ಗೆ ಮಾಹಿತಿ ನೀಡುವುದು ಕಂಡುಬಂತು.

ಉದ್ಘಾಟನಾ ಸಮಾರಂಭದಲ್ಲಿ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಎಫ್‌ಪಿಎಸಿಇ ಅಧ್ಯಕ್ಷ ಇ. ದೇವೇಂದ್ರಪ್ಪ, ಎಸಿಸಿಇ ದಾವಣಗೆರೆ ಶಾಖೆಯ ಛೇರ್ಮನ್ ವೆಂಕಟರಮಣರೆಡ್ಡಿ, ಐಸಿಐ ಛೇರ್ಮನ್ ಜಿ.ಎಂ ಲೋಹಿತಾಶ್ವ, ಪ್ರಕಾಶ್ ಮುಳೆ, ಜಿ.ಬಿ. ಸುರೇಶ್ ಕುಮಾರ್, ಯು.ಆರ್. ಕೊಟ್ರೇಶ್, ಎ.ಬಿ. ರವಿ, ಆನಂದ ಷಾ, ಸತೀಶ್, ರವೀಂದ್ರಬಾಬು ಮತ್ತಿತರರಿದ್ದರು.

ಸಿವಿಲ್ ಇಂಜಿನಿಯರ್ ಹೆಚ್.ವಿ. ಮಂಜುನಾಥಸ್ವಾಮಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸ್ಮಾರ್ಟ್ ಸಿಟಿ ದಾವಣಗೆರೆ ನಾಲ್ಕೂ ದಿಕ್ಕುಗಳಲ್ಲಿ ಶರವೇಗದಲ್ಲಿ ಬೆಳೆಯುತ್ತಿದೆ. ನಿವೇಶನಗಳ ದರ ಗಗನಕ್ಕೇರಿತ್ತಿದ್ದು, ಸಾಮಾನ್ಯ ಜನರಿಗೆ ಕಟ್ಟಡ ಕಟ್ಟಲು, ಸಾಧ್ಯವಾಗುತ್ತಿಲ್ಲ. ಕಾರಣ, ಬಹುಮಹಡಿ ಕಟ್ಟಡಗಳ ಅನಿವಾರ್ಯತೆ ಇದ್ದು, ಗಮನ ಹರಿಸಬೇಕು. ಅಲ್ಲದೇ, ಕಾನೂನು ತೊಡಕುಗಳನ್ನು ಪರಿಹರಿಸಿ ಬಹುಮಹಡಿ ಕಟ್ಟಡಗಳ ಪರವಾನಗಿ ಕೊಡಬೇಕು ಎಂದು ಒತ್ತಾಯಿಸಿದರು.

ಯು.ಎಸ್.ಕಮ್ಯುನಿಕೇಷನ್ ಮಾಲೀಕರಾದ ಎಸ್.ಎಂ.ಕೆ. ಉಮಾಪತಿ, ವ್ಯವಸ್ಥಾಪಕ ಕಲ್ಮೇಶ್ ತೋಟದ  ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿ, ಬೀಳ್ಕೊಟ್ಟರು.

error: Content is protected !!