ಕಳ್ಳತನ : ಮನೆ ಕೆಲಸಗಾರ್ತಿ ಬಂಧನ

ದಾವಣಗೆರೆ, ನ.13- ಇಲ್ಲಿನ ಜಯನಗರ `ಎ’ ಬ್ಲಾಕ್‌ನ ಮನೆಯೊಂದರಲ್ಲಿ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಟಿಜೆ ನಗರ ಪೊಲೀಸರು ಆರೋಪಿತಳ ವಿರುದ್ಧ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಬಂಧಿಸಿದ್ದಾರೆ.

ಉಮಾ ಮಹೇಂದ್ರಕರ್ ಎಂಬುವವರ ಮನೆಯಲ್ಲಿ 4.88 ಲಕ್ಷ ರೂ ಬೆಲೆಯ ಸುಮಾರು 100 ಗ್ರಾಂ ಬಂಗಾರದ ಆಭರಣ ಕಳ್ಳತವಾಗಿದ್ದು, ಈ ಕುರಿತು ಮನೆ ಕೆಲಸಕ್ಕೆ ಬರುತ್ತಿದ್ದ ಸಾಕಮ್ಮ ಎಂಬ ಮಹಿಳೆಯ ಮೇಲೆ ಅನುಮಾನ ಇರುವುದಾಗಿ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.

ಇಲ್ಲಿನ ಶ್ರೀರಾಮ ನಗರ ನಿವಾಸಿ ಹೆಚ್‌. ಸಾಕಮ್ಮ ಬಂಧಿತ ಆರೋಪಿಯಾಗಿದ್ದು, ಕಳ್ಳತನ ವಿಚಾರವಾಗಿ ಈಕೆಯನ್ನು ತನಿಖೆಗೆ ಒಳಪಡಿಸಿ 4.88 ಲಕ್ಷ ರೂ. ಮೌಲ್ಯದ 30 ಗ್ರಾಂ. ತೂಕದ ಹಸಿರು ಜೇಡ ಹರಳಿನ ಬಂಗಾರದ ನಕ್ಲೀಸ್, 4.5 ಗ್ರಾಂ. ತೂಕದ ಒಂದು ಜೊತೆ ಓಲೆ, 60 ಗ್ರಾಂ. ತೂಕದ ಎರಡೆಳೆಯ ಬಂಗಾರದ ಸರ ಮತ್ತು 15 ಗ್ರಾಂ. ತೂಕದ ಬಂಗಾರದ ಗುಂಡಿನ ಸರವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

error: Content is protected !!