ಐವರು ದರೋಡೆ ಕೋರರಿಗೆ ಕಾರಾಗೃಹ ಶಿಕ್ಷೆ, ತಲಾ 10 ಸಾವಿರ ರೂ. ದಂಡ

ದಾವಣಗೆರೆ, ನ.13- ಸಂಚರಿಸುವ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡಲು ಯತ್ನಿಸುತ್ತಿದ್ದ 5 ಜನ ಅಪರಾಧಿಗಳಿಗೆ  8 ತಿಂಗಳು ಸಾಧಾ ಕಾರಾಗೃಹ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸುವಂತೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.

ಮಹಾರಾಷ್ಟ್ರ ಮೂಲದವರಾದ ದುರ್ಯೋಧನ, ರಮೇಶ ಸೋಪಾನ, ಲಕ್ಷ್ಮಣ್, ಗಣೇಶ್ ಮತ್ತು ಲಕ್ಷ್ಮಣ್‌ ಜಾಧವ್ ಶಿಕ್ಷೆಗೆ ಒಳಗಾದ ಅಪರಾಧಿಗಳಾಗಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ಆಜಾದ್‌ ನಗರ ಠಾಣೆಯ ಪೊಲೀಸ್‌ ನಿರೀಕ್ಷಕ ಆರ್‌.ಜಿ. ಅಶ್ವಿನ್‌ ಕುಮಾರ್‌ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಹಾಕುವ ವೇಳೆ, ಮಾಗಾನಹಳ್ಳಿ ರಸ್ತೆಯ ಚೌಡೇಶ್ವರಿ ದೇವ ಸ್ಥಾನದ ಸ್ವಲ್ಪ ದೂರದಲ್ಲಿ ಸ್ಕಾರ್ಪಿಯೋ ಕಾರ್‌ ನಿಲ್ಲಿಸಿಕೊಂಡು ದರೋಡೆ ಮಾಡುತ್ತಿರುವುದನ್ನು ಗಮನಿಸಿ ಕೂಡಲೇ ದರೋಡೆಕೋರರನ್ನು ಬಂಧಿಸಿದ್ದರು.

ಪೊಲೀಸ್‌ ನಿರೀಕ್ಷಕ ಆರ್‌.ಜಿ. ಅಶ್ವಿನ್‌ ಕುಮಾರ್‌ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುತ್ತಾರೆ.

ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶರಾದ ಆರ್‌.ಎನ್‌. ಪ್ರವೀಣ್‌ ಕುಮಾರ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪೀರ್ಯಾದಿ ಪರ ಸರ್ಕಾರಿ ವಕೀಲ ಕೆ.ಜಿ ಜಯ್ಯಪ್ಪ ನ್ಯಾಯ ಮಂಡಿಸಿರುತ್ತಾರೆ.

error: Content is protected !!