ಶಿವಾಜಿ ನಗರದ ಚಿತ್ರಗಾರ ಗಲ್ಲಿಯ ಲ್ಲಿರುವ ಶ್ರೀ ನಿಮಿಷಾಂಬದೇವಿ ದೇವಸ್ಥಾನ ದಲ್ಲಿ ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಹಾಗೂ ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಮಹಿಳಾ ಸಮಾಜದ ವತಿಯಿಂದ ಶ್ರೀ ನಿಮಿಷಾಂಬ ದೇವಿಯ 66ನೇ ವಾರ್ಷಿಕ ಮಹೋತ್ಸವವನ್ನು ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಿಗ್ಗೆ 7 ರಿಂದ ಗಂಗಾಪೂಜೆ, ವೇದಘೋಷ ಗಳಿಂದ ಮೆರವಣಿಗೆ ಮೂಲಕ ಗಂಗಾ ದೇವಿ ತರುವುದು. ನಂತರ ಶ್ರೀ ದೇವಿಯ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ವಿಶೇಷ ಪೂಜೆ ನಡೆಯುವುದು. ಇಂದು ಸಂಜೆ 6.30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರುಗಳಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಯಶವಂತರಾವ್ ಜಾಧವ್, ಮೈಸೂರಿನ ಗೋಪಾಲರಾವ್ ದಾಪ್ಟೆ, ಬಾಗಲ ಕೋಟೆಯ ಶ್ರೀನಿವಾಸ ಪೇಟ್ಕರ್ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ, ಮಹಿಳೆಯರು ಮತ್ತು ಮಕ್ಕಳಿಂದ ದಾಂಡಿಯಾ ನೃತ್ಯ, ವಿಶೇಷ ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ. ಸಮಾಜದ ಅಧ್ಯಕ್ಷ ಗಣೇಶ್ರಾವ್ ಡೋಂ ಗರ್ಸೋನೆ, ಕಾರ್ಯದರ್ಶಿ ಪುಂಡಲೀಕ ರಾವ್ ಪೇಟ್ಕರ್ ಅಧ್ಯಕ್ಷತೆ ವಹಿಸುವರು.
ನಾಳೆ ಗುರುವಾರ ಬೆಳಗಿನ ಜಾವ 5.30ಕ್ಕೆ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆ, ಬೆಳಿಗ್ಗೆ 6.30 ರಿಂದ 7.30ರವರೆಗೆ ಉಪನಯನ, ನಂತರ ಬೆಳಿಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆ, ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿ ದೇವತಾ, ಗಣ ಹೋಮ, ಶ್ರೀ ನವಗ್ರಹ ದೇವತಾ ಮತ್ತು ಪ್ರಧಾನ ದೇವಿ ಶ್ರೀ ನಿಮಿಷಾಂ ದೇವಿಯ ಹೋಮ ಪ್ರಾರಂಭಿಸಲಾಗುವುದು. ಬಲಿ ಹರಣ, ಪೂರ್ಣಾಹುತಿ ಆದ ನಂತರ ಬೆಳಿಗ್ಗೆ 10.30ಕ್ಕೆ ಶ್ರೀ ನಿಮಿಷಾಂಬ ದೇವಿಯ ಉತ್ಸವ ಮೂರ್ತಿಯ ಮೆರ ವಣಿಗೆ ನಡೆಯಲಿದೆ. ಉತ್ಸವ ಬಂದ ಮೇಲೆ ಅಮ್ಮನ ವರಿಗೆ ಕುಂಕುಮಾರ್ಚನೆ, ಮಹಾನೈವೇದ್ಯ, ಮಹಾಮಂ ಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.