ಬೈಪಾಸ್ ರಸ್ತೆ, ಸರ್ಕಾರಿ ಡಿಗ್ರಿ ಕಾಲೇಜು ಮಂಜೂರಾತಿಗೆ ಒತ್ತಾಯ

ಬೈಪಾಸ್ ರಸ್ತೆ, ಸರ್ಕಾರಿ ಡಿಗ್ರಿ ಕಾಲೇಜು ಮಂಜೂರಾತಿಗೆ ಒತ್ತಾಯ

 ಮಲೇಬೆನ್ನೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಹರೀಶ್‌

ಮಲೇಬೆನ್ನೂರು, ನ. 12 – ಮಲೇಬೆನ್ನೂರು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಸೇರಿ ಗಮನ ಹರಿಸೋಣ, ಈ ನಿಟ್ಟಿನಲ್ಲಿ ಪುರಸಭೆ ಸದಸ್ಯರು ಚಿಂತನೆ ಮಾಡಬೇಕು. ನಾನು ನಿಮ್ಮ ಜೊತೆ ಇರುತ್ತೇನೆಂದು ಶಾಸಕ ಬಿ.ಪಿ. ಹರೀಶ್‌ ಹೇಳಿದರು.

 ಇಲ್ಲಿನ ಪುರಸಭೆ ಕಛೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

ಪಟ್ಟಣಕ್ಕೆ ಬೈಪಾಸ್‌ ರಸ್ತೆ ಮತ್ತು ಸರ್ಕಾರಿ ಡಿಗ್ರಿ ಕಾಲೇಜ್‌ ತುಂಬಾ ಅವಶ್ಯವಿದ್ದು. ಇದಕ್ಕಾಗಿ ನಾವೆಲ್ಲರೂ ಸೇರಿ ಪ್ರಯತ್ನಿಸೋಣ. ಏಕೆಂದರೆ, ಮಲೇಬೆನ್ನೂರು ಸೇರಿದಂತೆ ಸುತ್ತ-ಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಸುತ್ತಮುತ್ತಲಿನ ಡಿಗ್ರಿ ಓದಲು ಹೊನ್ನಾಳಿ, ಹರಿಹರಕ್ಕೆ ಹೋಗುತ್ತಿದ್ದಾರೆ. ಮಲೇಬೆನ್ನೂರುನಲ್ಲೇ ಸರ್ಕಾರಿ ಡಿಗ್ರಿ ಕಾಲೇಜು ಆರಂಭವಾದರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ಡಿಗ್ರಿ ಕಾಲೇಜು ಮಂಜೂರು ಮಾಡುವಂತೆ ಮತ್ತು ಮಲೇಬೆನ್ನೂರು ಪಟ್ಟಣದ ಅಭಿವೃದ್ಧಿಗೆ ಸ್ವಲ್ಪವಾದರೂ ವಿಶೇಷ ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ಪುರಸಭೆ ಸದಸ್ಯರು ನಿಯೋಗ ತರಳಬೇಕು, ನೀವು ಬಯಸಿದರೆ ನಾನು ನಿಮ್ಮ ಜೊತೆ ಬರುತ್ತೇನೆಂದು ಶಾಸಕ ಹರೀಶ್‌ ಹೇಳಿದರು.

ಅಪೂರ್ಣಗೊಂಡಿರುವ ಶವಾಗಾರ ಮತ್ತು ಕಾಂಪೌಂಡ್‌ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದ ಶಾಸಕರು ಬಂದಿರುವ ಅನುದಾನದಲ್ಲಿ ಕಾಮಗಾರಿಗಳ ಗುಣಮಟ್ಟ ಕಾಪಾಡಿ ಮತ್ತು ಶ್ರಮಿಕ ವರ್ಗ ಹಾಗೂ ಸ್ಲಂ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ಕೊಡಿ ಎಂದು ಸದಸ್ಯರಿಗೆ ತಿಳಿಸಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಪುರಸಭೆ ಸದಸ್ಯ ಗೌಡ್ರ ಮಂಜಣ್ಣ ಅವರು ಕಳೆದ ಅವಧಿಗೆ ಹೋಲಿಕೆ ಮಾಡಿದರೆ ಈ ಅವಧಿಯಲ್ಲಿ ಉತ್ತಮ ಅನುದಾನ ಬಂದಿದ್ದು, ನಗರೋತ್ಥಾನ ಯೋಜನೆಯಡಿ 1 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ನಡೆದಿವೆ.

66 ಕೋಟಿ ರೂ. ವೆಚ್ಚದಲ್ಲಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭಗೊಂಡಿದೆ ಎಂದರು. 

ಪುರಸಭೆ ಸದಸ್ಯ ನಯಾಜ್‌ ಮಾತನಾಡಿದರು. ಪುರಸಭೆ ಪ್ರಭಾರಿ ಅಧ್ಯಕ್ಷೆ ಶ್ರೀಮತಿ ನಪ್ಸಿಯಾ ಬಾನು ಚಮನ್‌ ಷಾ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಮಂಜುನಾಥ್‌, ಮುಖ್ಯಾಧಿಕಾರಿ ಭಜಕ್ಕ, ಆಶ್ರಯ ಸಮಿತಿ ಸದಸ್ಯ ಪೂಜಾರ್‌ ನಾರಾಯಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್‌ ಪಟೇಲ್‌, ಜನತಾ ಬಜಾರ್‌ ನಿರ್ದೇಶಕ ಪಿ.ಹೆಚ್‌. ಶಿವಕುಮಾರ್‌, ಪಿಎಸಿಎಸ್‌ ಅಧ್ಯಕ್ಷ ಯೂನೂಸ್‌, ಸರ್ಕಾರಿ ಕಾಲೇಜು ಉಪಾಧ್ಯಕ್ಷ ನಯಾಜ್‌ ಎಸ್‌ಡಿಎಂಸಿ ಅಧ್ಯಕ್ಷ ಓ.ಜಿ. ಮಂಜುನಾಥ್‌, ಜಿ.ಪಿ. ಹನುಮಗೌಡ, ಪುರಸಭೆ ಇಂಜಿನಿಯರ್‌ ರಾಘವೇಂದ್ರ, ಅಧಿಕಾರಿಗಳಾದ ಉಮೇಶ್‌ ದಿನಕರ್‌, ನವೀನ್, ಶಿವರಾಜ್‌  ಸೇರಿದಂತೆ, ಇನ್ನೂ ಅನೇಕರು ಈ ವೇಳೆ ಹಾಜರಿದ್ದರು. 

ಪುರಸಭೆ ಸದಸ್ಯ ಸಾಬೀರ್‌ ಅಲಿ ಸ್ವಾಗತಿಸಿದರು. ಬೀರಲಿಂಗೇಶ್ವರ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ. ಜಯ್ಯಣ್ಣ ನಿರೂಪಿಸಿದರು.

error: Content is protected !!