ವಾಣಿಜ್ಯ ವಿದ್ಯಾರ್ಥಿಗಳಿಗೆ ಸ್ಥಳಿಯ ಕಂಪನಿಗಳ ಅಧ್ಯಯನ ಅಗತ್ಯ

ವಾಣಿಜ್ಯ ವಿದ್ಯಾರ್ಥಿಗಳಿಗೆ ಸ್ಥಳಿಯ ಕಂಪನಿಗಳ ಅಧ್ಯಯನ ಅಗತ್ಯ

ಬಿ.ಕಾಂ ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ 

ದಾವಣಗೆರೆ, ನ.12- ವಾಣಿಜ್ಯ ವಿದ್ಯಾ ರ್ಥಿಗಳಿಗೆ ಸ್ಥಳೀಯ ಕಂಪನಿಗಳ ಅಧ್ಯಯನ ಅಗತ್ಯ,   ಅವುಗಳ ಆರ್ಥಿಕ ಸಾಧನೆ, ಮಾರು ಕಟ್ಟೆ ತಂತ್ರಗಳು, ಗ್ರಾಹಕ ಚಲನಗಳನ್ನು ಅಧ್ಯಯನ ನಡೆಸಿ, ಅರ್ಥ ಮಾಡಿಕೊಳ್ಳಬೇಕು ಎಂದು ಡಾ. ಮಂಜುನಾಥ್ ಹೇಳಿದರು

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿ ಸಮಿತಿ ಸಹಯೋಗದಲ್ಲಿ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳಿ ಗಾಗಿ ಕಳೆದ ವಾರ ಹಮ್ಮಿಕೊಳ್ಳಲಾಗಿದ್ದ `ಕಂಪನಿಗಳ ವಿಶ್ಲೇಷಣೆ’ ಕುರಿತ ತರಬೇತಿ ಕಾರ್ಯ ಕ್ರಮದಲ್ಲಿ  ಅವರು ಮಾತನಾಡಿ ದರು. ಗ್ರಾಹಕರ ಕೊಳ್ಳು ವಿಕೆ ಅತಿದೊಡ್ಡ ಮಹತ್ವ ವನ್ನು ಹೊಂದಿದೆ. ಈ ಹಿನ್ನೆಲೆ ಯಲ್ಲಿ, ಕಂಪನಿಗಳ ವಿಶ್ಲೇಷಣೆ ಒಂದು ಮುಖ್ಯ ಆಯಾಮವಾಗಿ ಹೊರಹೊ ಮ್ಮುತ್ತದೆ ಎಂದು ಅವರು ಹೇಳಿದರು ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಸಿ. ತಹಶೀಲ್ದಾರ್   ವಹಿಸಿದ್ದರು. ಕಾರ್ಯಕ್ರಮದಲ್ಲಿ  ಐಕ್ಯೂಎಸಿ ಸಂಯೋಜಕ  ಪ್ರೊ. ಡಾ. ಗುರುರಾಜ ಜೆ.ಪಿ., ಗೆಜೆಟೆಡ್ ಮ್ಯಾನೇಜರ್ ಶ್ರೀಮತಿ ಗೀತಾದೇವಿ ಟಿ.,  ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸುನಿತಾ ಕೆ.ಬಿ.  ಪ್ರೊ ರೇಖಾ,  ಪ್ರೊ ಶಂಕ್ರಯ್ಯ, ಪ್ರೊ. ಸಿದ್ದಮ್ಮ  ಅವರು ಉಪಸ್ಥಿತರಿದ್ದರು.

error: Content is protected !!