ವ್ಯಕ್ತಿತ್ವ ವಿಕಸನಕ್ಕೆ ಅಧಾತ್ಮ ಅವಶ್ಯಕ : ಮಧುಕುಮಾರ್

ವ್ಯಕ್ತಿತ್ವ ವಿಕಸನಕ್ಕೆ ಅಧಾತ್ಮ ಅವಶ್ಯಕ : ಮಧುಕುಮಾರ್

ಚನ್ನಗಿರಿ, ನ.11- ಆಹಾರ, ಗಾಳಿ, ನೀರು, ವ್ಯಕ್ತಿಯ ದೈಹಿಕ ಬೆಳವಣಿಗೆಗೆ ಕಾರಣವಾದರೆ ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಅಧಾತ್ಮದ ಜ್ಞಾನ ಅವಶ್ಯಕವಾಗಿದೆ ಎಂದು ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಗವಿಮಠದ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ  ಭಾನುವಾರ ಆಯೋಜಿಸಿದ್ದ  52ನೇ ವರ್ಷದ ಇಷ್ಟಲಿಂಗ ಶಿವಯೋಗಾನುಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನುಷ್ಯನ ಅಂತರಂಗ ಮತ್ತು ಬಹಿರಂಗ ಎರಡನ್ನೂ ಪರಿಶುದ್ದಗೊಳಿಸಲು ಅಧಾತ್ಮದ ಜ್ಞಾನ ಸಂಪತ್ತು ಅಗತ್ಯವಾಗಿ ಬೇಕಾಗುತ್ತದೆ. ಇಂದಿನ ಯಾಂತ್ರಿಕ ಯುಗದಲ್ಲಿನ ಉದ್ವೇಗ, ಒತ್ತಡ, ಆತಂಕಗಳ ಸುಳಿಗೆ ಸಿಲುಕಿರುವ ಜನಸಮುದಾಯಕ್ಕೆ ಮಠಗಳ ಆಶ್ರಯದಲ್ಲಿ  ನಡೆಯುವ ಅಧಾತ್ಮದ ಕಾರ್ಯಕ್ರಮಗಳು ನವಚೈತನ್ಯವನ್ನು ತಂದು ಕೊಡುತ್ತವೆ ಎಂದರು.

ಸೂರ್ಯ-ಚಂದ್ರರ ಮೇಲೆ ಆವಿಷ್ಕಾರಗಳು ಆಗುತ್ತಿರುವ ಇಂದಿನ ದಿನಮಾನಗಳಲ್ಲಿ ಮನುಷ್ಯ-ಮನುಷ್ಯರ ಮಧ್ಯೆ ದ್ವೇಷ, ಅಸೂಯೆ, ಈರ್ಷೆ ಮನೋಭಾವದ ಸಣ್ಣತನದ ಗೋಡೆಗ ಳನ್ನು  ಕಟ್ಟಿ ಕೊಳ್ಳಲಾಗುತ್ತಿದೆ. ಮಾನವೀಯ ಸಂಬಂಧಗ ಳಿಗೆ ಬೆಲೆ ಇಲ್ಲದಂತಾಗಿರುವ ಇಂದಿನ ದಿನಮಾನ ಗಳಲ್ಲಿ ಗುರು ಪರಂಪರೆಯಲ್ಲಿ ನಡೆಯುವ ಧಾರ್ಮಿಕ ಸಮ್ಮೇಳನಗಳು ಹಾಗೂ ಅಧಾತ್ಮ ಕಾರ್ಯಕ್ರಮಗಳು ನಮ್ಮಲ್ಲಿನ ಜಡತ್ವ, ಸಂಕುಚಿತ ಗುಣಗಳನ್ನು ಹೋಗಲಾಡಿಸಿ, ವಿಶಾಲ ಮನೋಭಾವನೆಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗವಿಮಠದ ಶ್ರೀ ಶಿವಕುಮಾರ ಹಾಲಸ್ವಾಮಿಗಳು ಸಾನ್ನಿಧ್ಯವನ್ನು ವಹಿಸಿದ್ದರು. ಮಠದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮಠದ  ಸಂಚಾಲಕ ಕೆ.ಎಂ.ವೀರಯ್ಯ, ಅಂಗಡೇರ ನಾಗರಾಜಪ್ಪ ಸುಧಾಕರ್, ಮಂಜುನಾಥ್ ಪೂಜಾರ್, ಭಾಗ್ಯ ಮಲ್ಲಿಕಾರ್ಜುನಸ್ವಾಮಿ ಮತ್ತಿತರರು  ಇದ್ದರು.

error: Content is protected !!