ರಾಣೇಬೆನ್ನೂರು ಶನೈಶ್ಚರ ಮಠದಲ್ಲಿ ನಾಡಿದ್ದು ಅತಿರುದ್ರ ಮಹಾಯಾಗ

ರಾಣೇಬೆನ್ನೂರು ಶನೈಶ್ಚರ ಮಠದಲ್ಲಿ ನಾಡಿದ್ದು ಅತಿರುದ್ರ ಮಹಾಯಾಗ

ರಾಣೇಬೆನ್ನೂರು, ನ.11- ಇಲ್ಲಿನ ಗಂಗಾಪುರ ರಸ್ತೆಯ ಶನೈಶ್ಚರ ಮಂದಿರದಲ್ಲಿ  ಸ್ವಾಮಿಯ ಬಯಲು ಆಲಯದ ದ್ವಾದಶ ಪ್ರತಿಷ್ಠಾನ ಮಹೋತ್ಸವದ ನಿಮಿತ್ಯ ಪೀಠಾಧಿಪತಿ  ಹಿರೇಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಇದೇ ದಿನಾಂಕ 14 ರಿಂದ 30ರವರೆಗೆ ಸಂಕಲ್ಪಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಅಷ್ಟಬಂಧ ಬ್ರಹ್ಮ ಕಲಶೋತ್ಸವ, ವಿಶ್ವ ಶಾಂತಿ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗೆ ಅತಿರುದ್ರ ಮಹಾಯಾಗ, ಲಕ್ಷ ರುದ್ರಾಕ್ಷಿ ಅರ್ಚನೆ, ಕೋಟಿ ಬಿಲ್ವಾರ್ಚನೆ, ಕೋಟಿ ಪಂಚಾಕ್ಷರಿ ಮಂತ್ರ ಜಪಯಜ್ಞ, ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಕಲ್ಯಾಣ ಮಹೋತ್ಸವ, ರೈತ ಚೈತನ್ಯ ಜ್ಯೋತಿ ಯಾತ್ರೆ, ಮಾತೃ ಸಂಗಮ ಮುಂತಾದ ಕಾರ್ಯಕ್ರಮಗಳು ಜರುಗುತ್ತವೆ.

ಮನುಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ತಿಲ ಲಕ್ಷ ದೀಪೋತ್ಸವ ಮುಂತಾಗಿ ಶ್ರೀ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪ್ರತಿವರ್ಷವೂ ನಡೆಯುವ ಈ ಸಮಾರಂಭಕ್ಕೆ ಜಗದ್ಗುರುಗಳು, ನಾಡಿನ ಹರಗುರು ಚರ ಮೂರ್ತಿಗಳು, ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ಜನಪ್ರತಿನಿಧಿಗಳು  ಭಾಗವಹಿಸುತ್ತಿದ್ದಾರೆ ಎಂದು ಶ್ರೀ ಗಳು ಹೇಳಿದರು.

error: Content is protected !!