ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಳ್ಳಿ ಮಕ್ಕಳದ್ದೇ ಮೇಲುಗೈ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಳ್ಳಿ ಮಕ್ಕಳದ್ದೇ ಮೇಲುಗೈ

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿನ ಪ್ರೇರಣಾ ಕೋಶ ಉದ್ಘಾಟನೆಯಲ್ಲಿ ಸಮೃದ್ಧಿ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಮಂಜುನಾಥ್ ಸಂಭಾಜಿ

ದಾವಣಗೆರೆ, ನ.11- ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರೇರಣಾ ಕೋಶ ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಗರದ ಸಮೃದ್ಧಿ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಮಂಜುನಾಥ್ ಸಂಭಾಜಿ ಅವರು ಸ್ಪರ್ಧಾರ್ಥಿ ಗಳನ್ನು ಕುರಿತು ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಳ್ಳಿಯ ಮಕ್ಕಳದೇ ಮೇಲುಗೈ ಎಂದರು. 

ಹಳ್ಳಿಯಿಂದ ನಗರದ ಕಾಲೇಜುಗಳಿಗೆ ಬರುವ ಮಕ್ಕಳಲ್ಲಿ ಶ್ರದ್ಧೆ ಹಾಗೂ ನಿಷ್ಠೆಯಿಂದ ಶ್ರಮಪಡುವ ಗುಣವಿ ರುತ್ತದೆ. ಹಾಗೆಯೇ ನಗರದಲ್ಲಿರುವ ಮಕ್ಕಳಲ್ಲಿಯೂ ಸಹಾ ಅತ್ಮಸ್ಥೈರ್ಯವಿರುತ್ತದೆ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ತರಬೇತಿಯ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಅತ್ಯುತ್ತಮ ಕಾರ್ಯಕ್ರಮವಾದ ಪ್ರೇರಣಾ ಕೋಶದ ಅಡಿಯಲ್ಲಿ ಮಾರ್ಗದರ್ಶನ ನೀಡುವ ಸದುದ್ದೇಶವಾಗಿರುತ್ತದೆ.

ಸ್ಪರ್ಧಾರ್ಥಿಗಳು ಈ ಕಾರ್ಯಕ್ರಮದ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ತಮ್ಮ ನೆಚ್ಚಿನ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಳ್ಳುವ ಮೂಲಕ ತಮ್ಮ ಕುಟುಂಬದ ಘನತೆ ಹಾಗೂ ಸಮಾಜದ ಸಧೃಡತೆಯನ್ನು ಹೆಚ್ಚಿಸಬೇಕೆಂದು ನೆರೆದಿದ್ದ ಸ್ಪರ್ಧಾರ್ಥಿಗಳಿಗೆ ಕಿವಿ ಮಾತು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜಣ್ಣ ಅವರು, ಪ್ರೇರಣಾ ಕೋಶವನ್ನು ಉದ್ಘಾಟಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ ಹಾಗೂ ಯಶಸ್ಸಿನ ಮಾರ್ಗಗಳ ಬಗ್ಗೆ ಸುಲಲಿತವಾಗಿ ತಿಳಿಸಿಕೊಟ್ಟರು. 

ಐಕ್ಯೂಎಸಿ ಸಂಚಾಲಕ ಡಾ. ಬೀಮಣ್ಣ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ರುವಾರಿ ಡಾ. ಕಾವ್ಯಶ್ರೀ ಅವರು ಪ್ರೇರಣಾ ಕೋಶದ ಮೂಲಕ ವಿಧ್ಯಾರ್ಥಿಗಳ ಸಬಲೀಕರಣವಾಗುವ ಮಹತ್ವವನ್ನು ವಿವರಿಸಿದರು. ಕಾಲೇಜಿನ ಅಧೀಕ್ಷಕ ಶೇಷಪ್ಪ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.  ಕವನ ಹಾಗೂ ಕಲ್ಪನ ಪ್ರಾರ್ಥಿಸಿದರೆ, ಕೀರ್ತನ ವಂದಿಸಿದರು.

error: Content is protected !!