ಸಮ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಚನ ಸಾಹಿತ್ಯ

ಸಮ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಚನ ಸಾಹಿತ್ಯ

ದಾವಣಗೆರೆ, ನ.11- 12 ನೇ ಶತಮಾನದ ವಚನ ಸಾಹಿತ್ಯವು ನೊಂದವರ, ದಮನಿತರ, ಧ್ವನಿ ಇಲ್ಲದವರ ನಾಲಿಗೆಯಾಗಿತ್ತೆಂದು ಆ ಮುಖೇನ ಶೋಷಿತ ಸಮುದಾಯಗಳಿಗೆ ಸಾಮಾಜಿಕ, ಸಾಂಸ್ಕೃತಿಕ ಸಮಾನತೆ ತಂದು ಕೊಟ್ಟು, ಸಮ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚನ್ನಗಿರಿ ಶಾಸಕ ಬಸವರಾಜ್ ವಿ. ಶಿವಗಂಗಾ ಇವರ ತಂದೆ -ತಾಯಿ ಹೆಸರಿನಲ್ಲಿರುವ ಶ್ರೀಮತಿ ಓಂಕಾರಮ್ಮ ಡಿ. ವೀರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ವಚನಗಳಲ್ಲಿ ವೈಚಾರಿಕತೆ’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ವಚನ ಸಾಹಿತ್ಯವು ಅರಿವು, ಆಚಾರ, ಅನುಭವದ ಸಾಹಿತ್ಯವಾಗಿತ್ತೆಂದು ಜನ ಮಾನಸದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು. 

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಶರಣರ ಆಶಯಗಳನ್ನು ವಚನ ಸಾಹಿತ್ಯದ ಮುಖೇನ ಜನಮಾನಸಕ್ಕೆ ತಲುಪಿಸುವಲ್ಲಿ ಶಾಲೆಗಳಲ್ಲಿ, ಮನೆ, ಮನೆಗಳಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಪ್ರಯತ್ನದ ಫಲವಾಗಿ ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ವಚನ ಸಾಹಿತ್ಯದ ಆಶಯಗಳು ಬಿಂಬಿತವಾಗಲು ಸಹಾಯಕವಾಗುತ್ತದೆ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಟಿ.ಎ. ಕುಸಗಟ್ಟಿ ಅವರು, ವಚನ ಸಾಹಿತ್ಯವು ಸಕಲರಿಗೂ ಲೇಸನ್ನೇ ಬಯಸಿದ ಸಾಹಿತ್ಯ ಹಾಗೂ ಜನರಾಡುವ ಜನಮಾನಸದ ಭಾಷೆಯಲ್ಲಿ ನಿರ್ಮಿತವಾದ ಸಾಹಿತ್ಯ ಎಂದರು.

ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಗಾಯತ್ರಿ ವಸ್ತ್ರದ್  ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.

ಬುಳ್ಳಾಪುರದ ಮಲ್ಲಿಕಾರ್ಜುನಪ್ಪ, ಭರ್ಮಪ್ಪ ಮೈಸೂರ್, ಆರ್. ಸಿದ್ದೇಶಪ್ಪ, ಜಿ.ಎಂ.ಕುಮಾರಪ್ಪ ಬಿ.ಟಿ.ಪ್ರಕಾಶ್, ನಿರ್ಮಲ ಶಿವಕುಮಾರ್, ವಾಣಿ ರಾಜಕುಮಾರ್‌, ಅರುಣಕುಮಾರಿ ಬಿರಾದಾರ, ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ದ್ದರು. ಎಂ.ಜಿ. ಶ್ವೇತ ಸ್ವಾಗತಿಸಿದರು. ಎಂ. ಸುಧಾರಾಣಿ ವಂದಿಸಿದರು. ಅನ್ನಪೂರ್ಣ ಪಾಟೀಲ್ ನಿರೂಪಿಸಿದರು.

error: Content is protected !!