ಕುಮಾರಸ್ವಾಮಿ ಹಗುರ ಮಾತು : ಖಂಡನೆ

ದಾವಣಗೆರೆ, ನ.11- ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಕುರಿತಂತೆ ಹಗುರವಾಗಿ ಮಾತನಾಡಿರುವ ಸಚಿವ ಜಮೀರ್ ಅಹ್ಮದ್ ಅವರ ವರ್ತನೆಯನ್ನು ಜಿಲ್ಲಾ ಜೆಡಿಎಸ್ ಮುಖಂಡ ಎಂ.ಎನ್. ನಾಗರಾಜ್ ಖಂಡಿಸಿದ್ದಾರೆ.

ಯಾರನ್ನೋ ಮೆಚ್ಚಿಸುವ ಭರದಲ್ಲಿ ಕುಮಾರಸ್ವಾಮಿ ಅವರ ಬಗ್ಗೆ ಮಾಡಿರುವ ಆರೋಪ ಮತ್ತು ನಿಂದನೆಯನ್ನು ಸಹಿಸುವುದಿಲ್ಲ ಎಂದು ಹೇಳಿರುವ ನಾಗರಾಜ್,  ಕೂಡಲೇ ಜಮೀರ್ ಅಹ್ಮದ್ ಅವರು ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

error: Content is protected !!