ಹೊನ್ನಾಳಿ ತಾಲ್ಲೂಕು ಗೊಲ್ಲರಹಳ್ಳಿ, ಹೊನ್ನಾಳಿ ಪಟ್ಟಣ, ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಮುಖ್ಯ ರಸ್ತೆಗಳಲ್ಲಿ ಡಿವೈಡರ್ ಮತ್ತು ರೋಡ್ ಲೈಟ್ ಪಿಲ್ಲರ್ಗಳಲ್ಲಿ ಗುಣಮಟ್ಟ ರಹಿತ ಕಾಮಗಾರಿ ನಡೆದಿದೆ ಎಂದು ಆಪಾದಿಸಿ ಸ್ಥಳ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಸೊರಟೂರು ಹನುಮಂತಪ್ಪ ಲೋಕಾಯಕ್ತಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ಮೇರೆಗೆ ಇಂದು ಮತ್ತು ನಾಳೆ ಲೋಕಾಯುಕ್ತ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಟಿ. ಶುಭಾ ಅವರು ತಮ್ಮ ತಂಡದೊಂದಿಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲಿದ್ದಾರೆ ಎಂದು ಹನುಮಂತಪ್ಪ ತಿಳಿಸಿದ್ದಾರೆ.