ನಗರದಲ್ಲಿ ನಾಡಿದ್ದು ಮಧುಮೇಹ ತಪಾಸಣೆ ಶಿಬಿರ, ಸ್ವಾಸ್ಥ್ಯ ಮೇಳ

ದಾವಣಗೆರೆ, ನ.11- ನಗರದ ಬಾಪೂಜಿ ಆಸ್ಪತ್ರೆ ಹೊರ ರೋಗಿಗಳ ವಿಭಾಗ ಹಾಗೂ ಎಸ್‌.ಎಸ್. ಹೈಟೆಕ್ ಆಸ್ಪತ್ರೆಯ ಆಡಳಿತ ಮಂಡಳಿ ವಿಭಾಗದಲ್ಲಿ ಇದೇ ದಿನಾಂಕ 14 ರಿಂದ 20 ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಸ್ವಾಸ್ಥ್ಯ ಮೇಳ ಮತ್ತು ಸಕ್ಕರೆ ಕಾಯಿಲೆ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎಸ್. ಕೇರ್ ಟ್ರಸ್ಟ್  ಕೋರ್ ಕಮಿಟಿ ಸದಸ್ಯ ಡಾ.ಮೂಗನಗೌಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಾಡಿದ್ದು ದಿನಾಂಕ 14 ರಂದು ಬೆಳಿಗ್ಗೆ 9 ಕ್ಕೆ ಜೆಜೆಎಂ ಮೆಡಿಕಲ್ ಕಾಲೇಜಿನಿಂದ `ವಾಕಥಾನ್’ ಆರಂಭವಾಗಲಿದ್ದು, ಡಾ. ಎಂ.ಸಿ. ಮೋದಿ  ವೃತ್ತದ ಮಾರ್ಗವಾಗಿ ಮೋದಿ ಕಣ್ಣಿನ ಆಸ್ಪತ್ರೆ, ಚರ್ಚ್‌ ರಸ್ತೆ, ರಾಮ್ ಅಂಡ್ ಕೋ ಸರ್ಕಲ್, ಎವಿಕೆ ಕಾಲೇಜು ರಸ್ತೆ, ಜಿಲ್ಲಾ ಕ್ರೀಡಾಂಗಣದ ಮೂಲಕ ಬಾಪೂಜಿ ಆಸ್ಪತ್ರೆಗೆ ಆಗಮಿಸಲಿದೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ವಾಕಥಾನ್‌ಗೆ ಚಾಲನೆ ನೀಡಲಿದ್ದಾರೆ.

ನಂತರ ಬೆಳಿಗ್ಗೆ 10.30 ರಿಂದ ಮಧು ಮೇಹ ಮತ್ತು ಸ್ವಾಸ್ಥ್ಯ ಮೇಳ ನಡೆಯಲಿದೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿಬಿರ ದಲ್ಲಿ ರಕ್ತ ಪರೀಕ್ಷೆ, ಇಸಿಜಿ, ಬಿಪಿ ಪರೀಕ್ಷೆ, ಕಿಡ್ನಿ ರೋಗ ತಜ್ಞರೊಂದಿಗೆ ಸಮಾಲೋ ಚನೆ, ಮಧುಮೇಹ ಚಿಕಿತ್ಸೆ ಸಮಾಲೋ ಚನೆ, ಇನ್ಸುಲಿನ್ ಪೆನ್ ಬಳಕೆಯ ತಿಳಿವಳಿಕೆ ನೀಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಭಾರತದಲ್ಲಿ ಪ್ರತಿ ವರ್ಷದಿಂದ ವರ್ಷಕ್ಕೆ ಸಕ್ಕರೆ ಕಾಯಿಲೆಯಿಂದ ಬಳಲು ತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಹಾರ, ಜೀವನ ಶೈಲಿ, ದೈಹಿಕ ಶ್ರಮ ಇಲ್ಲದೇ ಇರುವುದು. ಇತರೆ ಕಾರಣಗಳಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಸಕ್ಕರೆ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಮುಂಜಾಗ್ರತಾ ಕ್ರಮ, ಚಿಕಿತ್ಸೆ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಲತಾ, ಡಾ. ಶಾಂತಲಾ ಅರುಣ್ ಕುಮಾರ ಉಪಸ್ಥಿತರಿದ್ದರು.

error: Content is protected !!