ಎಸ್.ಎಸ್.ಕೆ. ಸಮಾಜಕ್ಕೆ ಸಿಎ ನಿವೇಶನದ ಭರವಸೆ

ಎಸ್.ಎಸ್.ಕೆ. ಸಮಾಜಕ್ಕೆ ಸಿಎ ನಿವೇಶನದ ಭರವಸೆ

ಶ್ರೀ ರಾಜರಾಜೇಶ್ವರಿ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

ದಾವಣಗೆರೆ, ನ.11- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 11 ಸಿಎ ನಿವೇಶನಗಳಿದ್ದು, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಅರ್ಜಿ ಸಲ್ಲಿಸಿದರೆ ಮಂಜೂರು ಮಾಡಿಸಿಕೊಡಲಾಗುವುದು ಎಂದು ದೂಡಾ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ ಭರವಸೆ ನೀಡಿದರು.

ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಿಂದ ನಗರದ ಶಂಕರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ರಾಜರಾಜೇಶ್ವರಿ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸ ವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಅವರು ಎಲ್ಲಾ ಸಮಾಜಗಳಿಗೂ ನಿವೇಶನ ಕಲ್ಪಿಸಿದ್ದಾರೆ ಎಂದು ಹೇಳಿದರು. ಕಿರಾಣಿ ಹಾಗೂ ಬಟ್ಟೆಯಂಗಡಿ ನಡೆಸುವ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಕಷ್ಟದ ಜೀವಿಗಳು. ಈ ಸಮು ದಾಯ ಮತ್ತಷ್ಟು ಸಂಘಟನೆ ಆಗಬೇಕಿದೆ. ಮಕ್ಕ ಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳು ಕೂಡ ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡ ಬೇಕು ಎಂದು ಅವರು ಕಿವಿಮಾತು ಹೇಳಿದರು.

ಕೊರೊನಾ ಅವಧಿಯಲ್ಲಿ ಕುಟುಂಬಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ ಶ್ರೇಯಸ್ಸು ಮಹಿಳೆಯರದು. ಗೃಹಿಣಿಯರು ಮನೆಗಳಲ್ಲಿ ಸುಮ್ಮನೆ ಕೂರದೆ ಬಿಡುವಿನ ವೇಳೆಯಲ್ಲಿ ಔದ್ಯೋಗಿಕ ಚಟುವಟಿಕೆಗಳನ್ನು ನಡೆಸಬೇಕಿದೆ ಎಂದು ದಿನೇಶಿ ಶೆಟ್ಟಿ ಸಲಹೆ ನೀಡಿದರು.

ಹುಬ್ಬಳ್ಳಿಯ ಹೆಸರಾಂತ ಸಂಗೀತಗಾರ ಪಂಡಿತ್ ಬಾಲಚಂದ್ರ ನಾಕೋಡ್‌ ಸಂಗೀತ ಗಾಯನದೊಂದಿಗೆ ರಂಜಿಸಿದರು. ನಂತರ ಮಾತ ನಾಡಿ, ಸಹಸಾರ್ಜುನ ಮಹಾರಾಜರ ಜಯಂತಿ ಯನ್ನು ಅಚ್ಚುಕಟ್ಟಾಗಿ  ನಡೆಸುತ್ತಿರುವುದು ಮೆಚ್ಚುಗೆಯ ವಿಚಾರ ಎಂದು ಶ್ಲ್ಯಾಘಿಸಿದರು.

ರಾಣೇಬೆನ್ನೂರಿನ ನಗರಸಭೆ ಸದಸ್ಯರಾದ ತ್ರಿವೇಣಿ ಎನ್‌. ಪವಾರ್‌ ಮಾತನಾಡಿ, ಹಿಂದೂ ಧರ್ಮ, ಸಂಸ್ಕೃತಿ ಉಳಿಯಬೇಕಾದರೆ   ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಬೇಕೆಂದರು. 

ಎಸ್‌ಎಸ್‌ಕೆ ಸಮಾಜದ ಜಿಲ್ಲಾ ಕಾರ್ಯ ದರ್ಶಿ ಮಹೇಶ್ ಸೋಳಂಕಿ ಮಾತನಾಡಿ, ಕ್ರಿಸ್ತ ಪೂರ್ವ 2600 ರ ಅವಧಿ ಯಲ್ಲಿದ್ದ ಸಹ ಸ್ರಾರ್ಜುನ ಮಹಾರಾಜರು ಶೌರ್ಯಕ್ಕೆ ಹೆಸರಾಗಿ ದ್ದರು. ಶತ್ರುಗಳು ಇವರಿಗೆ ಶರಣಾಗುತ್ತಿದ್ದರು. ಸಪ್ತ ಚಕ್ರವರ್ತಿಗಳಲ್ಲಿ ಒಬ್ಬರಾಗಿದ್ದರು ಎಂದು ಸ್ಮರಿಸಿದರು. ಮಹಾಭಾರತ, ವಾಯುಪುರಾಣ ಗ್ರಂಥಗಳಲ್ಲಿ ಸಹಸ್ರಾರ್ಜುನ ಮಹಾರಾಜರ ಉಲ್ಲೇಖವಿದೆ. ಅವರ ಜಪ ಅಥವಾ 108 ಬಾರಿ ಪಾರಾಯಣ ಮಾಡಿದವರಿಗೆ ನಷ್ಟವಾದ ವಸ್ತು ಗಳು ಮರಳುತ್ತವೆ ಎಂಬ ನಂಬಿಕೆ ಇದೆ ಎಂದರು.

ಎಸ್‌ಎಸ್‌ಕೆ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಾರಸಾ ಆರ್. ಕಾಟ್ವೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶುಭಾಂಜಲಿ ಕಠಾರೆ, ನಾಗರತ್ನಾ ಬದ್ದಿ, ಪ್ರವೀಣ್ ಕಾಟ್ಟೆ ಇತರರಿದ್ದರು. ಗಿರೀಶ್‌ ಮೆಹರಾಡೆ ಸ್ವಾಗತಿಸಿದರು.

error: Content is protected !!