ಹೊನ್ನಾಳಿ, ನ. 8 – ಯಾವುದೇ ವಿಷಯವಾರು ಶಿಕ್ಷಕರ ತರಬೇತಿ ಕಾರ್ಯಾಗಾರಗಳು ಕಾಲ ಕಾಲಕ್ಕೆ ಅತ್ಯವಶ್ಯಕ ಹಾಗೂ ಪರಸ್ಪರ ಶಿಕ್ಷಕರ ಚರ್ಚೆಗೆ ಒಂದು ಉತ್ತಮ ವೇದಿಕೆಯಾಗಲಿದೆ ಎಂದು ವಿಜಯ ಕಾಲೇಜು ಪ್ರಾಂಶುಪಾಲ ಎಸ್. ವಸಂತಕುಮಾರ್ ಹೇಳಿದರು.
ತಾಲ್ಲೂಕು ಶಿಕ್ಷಣ ಇಲಾಖೆ ಹಾಗೂ ಚಿಗುರು ಸಂಸ್ಥೆಯ ಆಶ್ರಯದಲ್ಲಿ ಮಾರಿ ಕೊಪ್ಪ ರಸ್ತೆಯಲ್ಲಿರುವ ವಿಜಯ ಕಾಲೇಜಿನ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಇಂಗ್ಲಿಷ್ ವಿಷಯವಾರು ಶಿಕ್ಷಕರ ತರಬೇತಿ 3 ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಇಸಿಒ ಹನುಮಂತಪ್ಪ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲು ಇಂದಿನ ತರಬೇತಿ ಹೆಚ್ಚು ಸಹಕಾರಿಯಾಗಲಿ ಎಂದು ಆಶಿಸಿದರು.
ಇಂಗ್ಲಿಷ್ ಭಾಷಾ ಕ್ಲಬ್ ಅಧ್ಯಕ್ಷ ಸಿದ್ಧಪ್ಪ ಮಾತನಾಡಿ, ಪ್ರಶ್ನೆ ಪತ್ರಿಕೆಯ ಸಿದ್ದಪಡಿಸಲು ಶಿಕ್ಷಕರ ವೃತ್ತಿಗೆ ಕಾರ್ಯಾಗಾರವು ಕನ್ನಡಿಯಾಗಿದ್ದು. ಅರ್ಹ ವಿದ್ಯಾರ್ಥಿಗಳಿಗೆ ಸ್ಥಾನಮಾನ ದೊರೆಯುವಲ್ಲಿ ಪ್ರಾಮಾಣಿಕತೆಯ ಪರೀಕ್ಷೆಗೆ ಒತ್ತು ನೀಡಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆ ತರುವಂತಹ ಭವಿಷ್ಯದ ವಿದ್ಯಾರ್ಥಿಗಳನ್ನು ನಾವೇ ಸಿದ್ಧಪಡಿಸ ಬೇಕಾದ ಜವಾಬ್ದಾರಿ ನಮ್ಮದಾಗಬೇಕಿದೆ ಎಂದರು. ಇಂಗ್ಲಿಷ್ ಭಾಷಾ ಕ್ಲಬ್ ಕಾರ್ಯದರ್ಶಿ ಶಿವಕುಮಾರ್, ತರಬೇತಿ ಸಂಪನ್ಮೂಲ ಶಿಕ್ಷಕ ಮಾರುತಿ, ವಿಶ್ವನಾಥ, ಚಿಗುರು ಸಂಸ್ಥೆಯ ನಿರ್ದೇಶಕ ಸುನೀಲ್ ಕುಮಾರ್ ಇನ್ನಿತರರಿದ್ದರು. ದೀಪ್ತಿ, ಶ್ರೇಯಾ ಪ್ರಾರ್ಥಿಸಿ, ಶಿಕ್ಷಕ ಚನ್ನೇಶ ಸ್ವಾಗತಿಸಿ, ಜಬಿವುಲ್ಲಾ ನಿರೂಪಿಸಿ, ನಳಿನಿ ವಂದಿಸಿದರು.