ದಾವಣಗೆರೆ, ನ. 8- ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ಭಾಷೆ ಮರೆಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೆ.ಹೆಚ್.ಮಂಜುನಾಥ್ ಅಭಿಪ್ರಾಯಿಸಿದರು.
ಸ್ಥಳೀಯ ಕಲಾಕುಂಚ ಕಛೇರಿಯಲ್ಲಿ ಆಚರಿಸಲಾದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ ದರು. ನಮ್ಮ ನಾಡು, ನುಡಿಗೆ ಐತಿಹಾಸಿಕ ಪರಂಪರೆ ಇದೆ. ಸಾವಿರಾರು ವರ್ಷಗಳ ಅದೆಷ್ಟೋ ಶಾಸನ ದಾಖಲೆಗಳು ಇವೆ.
ಕನ್ನಡ ನಾಡು, ನುಡಿ ಕೇವಲ ನವೆಂಬರ್ಗೆ ಸೀಮಿತವಾಗದೇ ವರ್ಷಪೂರ್ತಿ ನಿತ್ಯೋತ್ಸವವಾಗಲಿ ಎಂದು ಅವರು ಹೇಳಿದರು.
ಶ್ರೀಮತಿ ಮುಕ್ತಾ ಶ್ರೀನಿವಾಸಪ್ರಭು ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕನ್ನಡ ಹಬ್ಬಕ್ಕೆ ಲಲಿತಕುಮಾರ್ ಜೈನ್ ಸ್ವಾಗತಿಸಿದರು.
ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ಶೆಣೈ ನಿರೂಪಿಸಿದರು. ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ವಂದಿಸಿದರು
ಸಂಸ್ಥೆಯ ಪ್ರಮುಖರಾದ ಲಲಿತ ಕಲ್ಲೇಶ್, ಶ್ರೀಮತಿ ಪ್ರಭಾ ರವೀಂದ್ರ, ವಿ.ಕೃಷ್ಣಮೂರ್ತಿ, ಕೆ.ಸಿ.ಉಮೇಶ್, ಜ್ಯೋತಿ ಗಣೇಶ್ಶೆಣೈ, ವಸಂತಿ ಮಂಜುನಾಥ್, ರೇಣುಕಾ ರಾಮಣ್ಣ, ಪೂರ್ಣಿಮಾ ಲೋಹಿತಾಶ್ವ ಲಕ್ಷ್ಮೀ ಸುರೇಶ್, ಚನ್ನಬಸವ ಶೀಲವಂತ್ ಮುಂತಾದವರು ಉಪಸ್ಥಿತರಿದ್ದರು.