ದೊಡ್ಡಬಾತಿಯಲ್ಲಿ ನಾಳೆ ಶ್ರೀ ಕೋಟೆ ಆಂಜನೇಯ ದೇವಸ್ಥಾನದ ಉದ್ಘಾಟನೆ

ದೊಡ್ಡಬಾತಿಯಲ್ಲಿ ನಾಳೆ ಶ್ರೀ ಕೋಟೆ ಆಂಜನೇಯ ದೇವಸ್ಥಾನದ ಉದ್ಘಾಟನೆ

ದಾವಣಗೆರೆ, ನ. 7 – ಇಲ್ಲಿಗೆ ಸಮೀಪದ ದೊಡ್ಡ ಬಾತಿ ಗ್ರಾಮದ ಶ್ರೀ ಕೋಟೆ ಆಂಜನೇಯ ದೇವಸ್ಥಾನ ಉದ್ಘಾಟನೆ, ಶಿಲಾಮೂರ್ತಿ, ನವಗ್ರಹ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 9 ರ ಶನಿವಾರ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. 

ರಾಮಘಟ್ಟ ಪುರವರ್ಗ ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ಮತ್ತು ಆವರಗೊಳ್ಳದ ಶ್ರೀ ದೊಡ್ಡವೀರಯ್ಯ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನಾಳೆ ದಿನಾಂಕ 8 ರ ಶುಕ್ರವಾರ ಶ್ರೀ ರೇವಣಸಿದ್ದೇಶ್ವರ ಸ್ವಾಮಿ (ದೊಡ್ಡಬಾತಿ), ಶ್ರೀ ಆಂಜನೇಯಸ್ವಾಮಿ (ಹಳೇಬಾತಿ), ಶ್ರೀ ಸೂಳೆಕೆರೆ ಸಿದ್ದೇಶ್ವರ ಸ್ವಾಮಿ (ಶಾಂತಿಸಾಗರ – ಸೂಳೆಕೆರೆ), ಶ್ರೀ ಆಂಜನೇಯ ಸ್ವಾಮಿ (ನೀಲಾನಹಳ್ಳಿ), ಶ್ರೀ ವೀರಭದ್ರೇಶ್ವರ ಸ್ವಾಮಿ (ಆವರಗೊಳ್ಳ), ಶ್ರೀ ಆಂಜನೇಯ ಸ್ವಾಮಿ (ದೊಗ್ಗಳ್ಳಿ), ಶ್ರೀ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ (ಅಮರಾವತಿ), ಶ್ರೀ ಆಂಜನೇಯ ಸ್ವಾಮಿ (ಕುಂದುವಾಡ), ಶ್ರೀ ಬೀರಲಿಂಗೇಶ್ವರ ಸ್ವಾಮಿ (ದೊಡ್ಡಬಾತಿ), ಶ್ರೀ ಆಂಜನೇಯ ಸ್ವಾಮಿ (ಶಾಮನೂರು) ದೇವರುಗಳು ಶ್ರೀ ಕೋಟೆ ಆಂಜನೇಯ ದೇವಸ್ಥಾನ ಉದ್ಘಾಟನೆಗೆ ಆಗಮಿಸುವರು. ನಾಡಿದ್ದು ದಿನಾಂಕ 9ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಏರ್ಪಾಡಾಗಿರುವ ಧಾರ್ಮಿಕ ಸಭೆಯನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದು, ದೊಡ್ಡಬಾತಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಜೆಸಿಬಿ ಹನುಮಂತಪ್ಪ ಅಧ್ಯಕ್ಷತೆ ವಹಿಸುವರು. 

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಲೋಕಸಭಾ ಸದಸ್ಯ ಡಾ. ಪ್ರಭಾ ಮಲ್ಲಿಕಾರ್ಜುನ್, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕರುಗಳಾದ ಎಸ್.ವಿ. ರಾಮಚಂದ್ರ, ಹೆಚ್.ಎಸ್. ಶಿವಸಂಕರ್,
ಎಸ್. ರಾಮಪ್ಪ, ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರ ಸ್ವಾಮಿ, ತಹಶೀಲ್ದಾರ್ ಡಾ. ಎಂ.ಬಿ. ಅಶ್ವತ್ಥ್ ಅತಿಥಿಗಳಾಗಿದ್ದಾರೆ.

error: Content is protected !!