ಹೊನ್ನಾಳಿ, ನ. 7- ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಇಂದು ಕೆ. ಶಿವಪದ್ಮ ಹಾಗೂ ಕೆ. ಅರುಣ ನಾಮಪತ್ರ ಸಲ್ಲಿಸಿದ್ದಾರೆ.
ಖಜಾಂಚಿ ಸ್ಥಾನಕ್ಕೆ ಬಿ.ಎಂ. ಅನಿಲ್ ಕುಮಾರ್, ಎಂ.ಎಲ್. ರಾಜಕುಮಾರ್, ಹೆಚ್.ಎಸ್. ಚೇತನ್ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯ ಪರಿಷತ್ಗೆ ಬಿ.ಎಂ.ಧರ್ಮಪ್ಪ, ಎಂ. ನಾಗರಾಜನಾಯ್ಕ, ಅಭಿಜಿತ್ ಚವ್ಹಾಣ್ ನಾಮಪತ್ರ ಸಲ್ಲಿಸಿದ್ದು, ನಾಳೆ ದಿನಾಂಕ 8 ರಂದು ನಾಮಪತ್ರ ಪರಿಶೀಲನೆ, ದಿನಾಂಕ 11 ರಂದು ನಾಮಪತ್ರ ವಾಪಸ್ ಪಡೆಯುವುದು. 16 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಿಪ್ಪೇಶಪ್ಪ ತಿಳಿಸಿದ್ದಾರೆ.