ಹೊನ್ನಾಳಿ, ನ.6- ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನಕ್ಕೆ 1 ಕೋಟಿ ರೂಗಳ ಅನುದಾನ ನೀಡುವಂತೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಲೋಕಸಭಾ ಸದಸ್ಯರಲ್ಲಿ ಮನವಿ ಮಾಡಿದೆ.
ಪಟ್ಟಣದಲ್ಲಿ ನಿರಂತರ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯತ್ತಿರುತ್ತವೆ. ಆದರೆ ಪರಿಷತ್ತಿಗೆ ತನ್ನದೇ ಆದ ಸ್ವಂತ ಕಟ್ಟಡ ಇಲ್ಲದೇ ತೊಂದರೆ ಆಗಿದ್ದು, ಸಾಂಸ್ಕೃತಿಕ ಭವನ ನಿರ್ಮಿಸಲು ಹಿರೇಕಲ್ಮಠದ ಸ್ವಾಮೀಜಿಯವರು 30x 60 ನಿವೇಶನ ನೀಡಿ ಕಟ್ಟಡದ ತಳಹದಿ ಮುಗಿಯುವವರಿಗೂ ಸಹಕಾರ ನೀಡಿದ್ದಾರೆ.
ಹಣಕಾಸಿನ ತೊಂದರೆಯಿಂದಾಗಿ ಕಟ್ಟಡದ ಕೆಲಸ ನಿಂತು ಹೋಗಿರುವುದರಿಂದಾಗಿ ತಾವುಗಳು ಸಹಕಾರ ನೀಡಬೇಕು ಎಂದು ಕಸಾಪ ಅಧ್ಯಕ್ಷ ಜಿ.ಮುರಿಗೆಪ್ಪ ಗೌಡ ಮತ್ತು ಸಮಿತಿಯ ಪದಾಧಿಕಾರಿಗಳು ಸಂಸದರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.