ದಾವಣಗೆರೆ, ನ.6- ನಗರದ ಜಿಎಂ ವಿಶ್ವವಿದ್ಯಾಲಯವು ಐದು ಪ್ರತಿಷ್ಠಿತ ಕಂಪನಿಗಳೊಡನೆ ಒಡಂಬಡಿಕೆ ಮಾಡಿಕೊಂಡಿದೆ.
ಈ ಸಂದರ್ಭದಲ್ಲಿ ಬೆಂಗಳೂರಿನ ಅಡ್ವಾನ್ಸ್ಡ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಅಂಡ್ ಸಲ್ಯೂಷನ್ ಮುಖ್ಯಸ್ಥ ಸುನಿಲ್ ಟಿ. ಶಂಬಟ್ಟಣ್ಣನವರ್, ಎಎಂಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಆಪರೇಷನ್ಸ್ ಹೆಡ್ ಶಶಿಕುಮಾರ್, ಸುಜ್ಲಾನ್ ಕಂಪನಿಯ ಕರ್ನಾಟಕ ವಿಭಾಗದ ಮುಖ್ಯಸ್ಥ ಜನಾರ್ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಜಗದೀಶ್, ನಮ ಸ್ಕಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಗಣೇಶ್ ವಿ ಶೆಟ್ಟಿ ಮತ್ತು ಪಿ.ಎಸ್.ಕೆ ಫಾರ್ಮಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಬಸವರಾಜ್ ಉಪಸ್ಥಿತರಿದ್ದರು.
ಈ ಒಡಂಬಡಿಕೆಯಿಂದ ಮುಂದಿನ ದಿನಗಳಲ್ಲಿ ಸಂಶೋಧನಾ ವಿಭಾಗದಲ್ಲಿ ಜಂಟಿಯಾಗಿ ಕೆಲಸ ಮಾಡುವುದು, ವಿದ್ಯಾರ್ಥಿಗಳನ್ನು ಕೈಗಾರಿಕೆಗಳಿಗೆ ತಕ್ಕಂತೆ ತಯಾರು ಮಾಡುವುದು, ಪ್ಲೇಸ್ಮೆಂಟ್, ಇಂಟರ್ನ್ಶಿಪ್, ವಿವಿಧ ಇತರೆ ಚಟುವಟಿಕೆಗಳಿಗೆ ಸಮನ್ವಯ ಮತ್ತು ಬೆಂಬಲದೊಂದಿಗೆ ಕೆಲಸ ಮಾಡಬಹುದಾಗಿದೆ.
ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಆರ್. ಶಂಕಪಾಲ್, ಸಹ ಕುಲಪತಿ ಡಾ. ಎಚ್. ಡಿ. ಮಹೇಶಪ್ಪ, ಸೀನಿಯರ್ ಡೀನ್ ಡಾ. ಕರಿಬಸಪ್ಪ, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ತೇಜಸ್ವಿ ಕಟ್ಟಿಮನಿ ಟಿ. ಆರ್, ಸಿಐಜಿಎಸ್ಆರ್ಡಿ ವಿಭಾಗದ ನಿರ್ದೇಶಕ ಡಾ. ರಾಜಕುಮಾರ್ ಡಿ.ಜಿ, ಸಹಾಯಕ ನಿರ್ದೇಶಕರಾದ ಡಾ.ಪೂಜಿತ ಬಿ.ಎಸ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.