ದಾವಣಗೆರೆ, ನ.5- ಮಗನ ಕಾಲೇಜು ಶುಲ್ಕ ಕಟ್ಟಲು ಬಂದು ಜ್ಯೂಸ್ ಅಂಗಡಿಯಲ್ಲಿ ಬಿಟ್ಟು ಹೋಗಿದ್ದ ಹಣ ಶಾಸಕ ಕೆ.ಎಸ್.ಬಸವಂತಪ್ಪ ಅವರ ಕೈಗೆ ಸಿಕ್ಕಿದ್ದು, ಸಿಕ್ಕಿದ್ದ ಹಣವನ್ನು ಕಳೆದುಕೊಂಡ ಮಾಲೀಕನಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ರಾಣೆಬೇನ್ನೂರು ಮೂಲದ ಕಿರಾಣಿ ಅಂಗಡಿ ಮಾಲೀಕ ವೆಂಕಟೇಶ್ ಎಂಬುವವರು ಮಗನನ್ನು ಶಿರಮಗೊಂಡನಹಳ್ಳಿ ಬಳಿ ಇರುವ ಅನ್ಮೋಲ್ ಕಾಲೇಜಿಗೆ ಸೇರಿಸಿದ್ದು, ಕಾಲೇಜು ಶುಲ್ಕ ಕಟ್ಟಲು ಕಾರಿನಲ್ಲಿ ನಗರಕ್ಕೆ ಬಂದಿದ್ದಾರೆ. ರಾಂ ಅಂಡ್ ಕೋ ವೃತ್ತದಲ್ಲಿರುವ ರಸವಂತಿ ಜ್ಯೂಸ್ ಸೆಂಟರ್ನಲ್ಲಿ ಜ್ಯೂಸ್ ಕುಡಿದು ಹಣವಿದ್ದ ಬ್ಯಾಗನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು.