ಕುಷ್ಠರೋಗ ಪತ್ತೆ ಅಭಿಯಾನ

ಕುಷ್ಠರೋಗ ಪತ್ತೆ ಅಭಿಯಾನ

ಮಲೇಬೆನ್ನೂರು, ನ. 4 – ದೇವರಬೆಳಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎರೆಬೂದಿಹಾಳ್ ಗ್ರಾಮದಲ್ಲಿ ಕುಷ್ಠರೋಗ ಪತ್ತೆ ಅಭಿಯಾನ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಆಂದೋಲನದ ಈ ವರ್ಷದ ಘೋಷವಾಕ್ಯ`ಕಳಂಕವನ್ನು ಕೊನೆಗೊಳಿಸಿ, ಘನತೆಯನ್ನು ಎತ್ತಿ ಹಿಡಿಯಿರಿ’ ಎಂಬ ಸಂದೇಶದೊಂದಿಗೆ ಜಾಗೃತಿ ಮೂಡಿಸಲಾಯಿತು.  

ಕಾರ್ಯಕ್ರಮದಲ್ಲಿ ಗ್ರಾ ಪಂ ಸದಸ್ಯರಾದ ಶಿವರಾಜ್, ದಿವಾಕರ್,  ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ, ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಆದರ್ಶ, ಆಶಾ ಕಾರ್ಯಕರ್ತೆ ಶ್ರೀಮತಿ ಪುಷ್ಪ ಹಾಗೂ ಪುರುಷ ಸ್ವಯಂ ಸೇವಕರು ಹಾಜರಿದ್ದರು.

error: Content is protected !!