ದಾವಣಗೆರೆ, ನ.1- ದಾವಣಗೆರೆ ಸ್ಮಾರ್ಟ್ ಸಿಟಿ ಕಛೇರಿಯಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣಗೊಳಿಸುವುದರ ಮೂಲಕ 69ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡಿದ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ಕರ್ನಾಟಕ ಧ್ವಜದ ಪರಿಚಯ ಹಾಗೂ ಕರ್ನಾಟಕ ರಚನೆಗೊಂಡ ಇತಿಹಾಸ ಹಾಗೂ ಅದಕ್ಕೆ ಕಾರಣೀಭೂತರಾದ ಮಹಾತ್ಮರನ್ನು ನೆನೆದರು. ಈ ಸಂದರ್ಭದಲ್ಲಿ ಮುಖ್ಯ ಹಣಕಾಸು ಅಧಿಕಾರಿ ಹೆಚ್. ಗಿರೀಶ್, ಕಂಪನಿ ಕಾರ್ಯದರ್ಶಿ ಎಂ. ಅರುಣಕುಮಾರ್, ಪ್ರಧಾನ ವ್ಯವಸ್ಥಾಪಕ ಎಸ್.ಎ. ಶಿವರಾಜು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.