ಖಾದಿ ಉತ್ಪನ್ನಗಳಿಗೆ ಪ್ರೋತ್ಸಾಹ

ಖಾದಿ ಉತ್ಪನ್ನಗಳಿಗೆ ಪ್ರೋತ್ಸಾಹ

ದಾವಣಗೆರೆ, ನ. 3 – ಗಾಂಧೀಜಿಯವರ ಕನಸಿನ ಖಾದಿ ಹಾಗೂ ಗ್ರಾಮೀಣ ಉದ್ಯೋಗದ ಕನಸು ನನಸು ಮಾಡುವ ನಿಟ್ಟಿನಲ್ಲಿ ಇಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಮಂಡಳಿ ಹಾಗೂ ದಾವಣಗೆರೆ ಜಿಲ್ಲೆಯ ಎಲ್ಲಾ ಖಾದಿ ಸಂಘ ಸಂಸ್ಥೆಗಳ ವತಿಯಿಂದ ಖಾದಿ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಖಾದಿ ಮಂಡಳಿ ಉಪಮುಖ್ಯ ಕಾರ್ಯ ನಿರ್ವಾಧಿಕಾರಿ ನವೀನ್ ಕುಮಾರ್ ಹಾಗೂ ಕೆಎಸ್‌ಎಸ್‌ಬಿಎಡ್ ಕಾಲೇಜಿನ ಉಪನ್ಯಾಸಕರಾದ ಕಲ್ಯಾಣಿ ಹಾಗೂ ಹಾಲೇಶ್ ಅವರು ಭಾಗವಹಿಸಿದ್ದರು. 

ಜನರು ಖಾದಿ ಬಟ್ಟೆಯನ್ನು ಹೆಚ್ಚು ಹೆಚ್ಚು ಖರೀದಿ ಮಾಡುವುದರಿಂದ ಗ್ರಾಮೀಣ ಭಾಗದ ನಿರುದ್ಯೋಗವನ್ನು ವಿವರಿಸಿ ನಿವಾರಿಸಲು ಅನುಕೂಲವಾಗು ತ್ತದೆ ಎಂದು ಖಾದಿ ಮಂಡಳಿ ಡಿ ಓ ಸಿ ಓ ನವೀನ್ ಕುಮಾರ್ ಅವರು ತಿಳಿಸಿದರು.  ಕಾಲೇಜಿನ ಬಿಎಡ್ ವಿದ್ಯಾರ್ಥಿಗಳಿಗೆ ಖಾದಿ ಬಟ್ಟೆ ಸ್ವತಂತ್ರದ ಸಂಕೇತ ಸ್ವದೇಶಿ ವಸ್ತ್ರಗಳನ್ನು ಖರೀದಿಸಿ ಪ್ರೋತ್ಸಾಹಿಸಿ  ಸ್ವದೇಶೀಯ ನಿರುದ್ಯೋಗ ನಿವಾರಣೆ ಮಾಡಲು ಉತ್ತೇಜನ ನೀಡಿದಂತಾಗುತ್ತದೆ ಎಂದು ವಿವರಿಸಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲೆಯ ಎಲ್ಲಾ ಖಾದಿ ಸಂಘಗಳ ನೂಲುಗಾರರು, ನೇಕಾರರು ಹಾಗೂ ಕೆಎಸ್‌ಎಸ್‌ ಬಿ ಎಡ್ ಕಾಲೇಜಿನ ವಿದ್ಯಾರ್ಥಿಗಳು ಪಥಸಂಚಲನ ಮಾಡಿ ಘೋಷಣೆ ಕೂಗುತ್ತಾ ಜನರಲ್ಲಿ ಖಾದಿ ಬಟ್ಟೆ ಕರೆದಿ ಬಗ್ಗೆ ಅರಿವು ಮಾಡಲಾಯಿತು.

error: Content is protected !!