ಟೆಕ್ವಾಂಡೊ ಸ್ಪರ್ಧೆಯಲ್ಲಿ ಗಣೇಶ್‌ಗೆ ಚಿನ್ನದ ಪದಕ

ಟೆಕ್ವಾಂಡೊ ಸ್ಪರ್ಧೆಯಲ್ಲಿ ಗಣೇಶ್‌ಗೆ ಚಿನ್ನದ ಪದಕ

ದಾವಣಗೆರೆ, ಅ.31- ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಕಳೆದ ವಾರ ನಡೆದ 10ನೇ ಟೆಕ್ವಾಂಡೊ ಅಂತರರಾಷ್ಟ್ರೀಯ ಟೂರ್ನಿಯ 12 ರಿಂದ 14 ವರ್ಷದೊಳಗಿನ ಪೂಮ್‌ ವಿಭಾಗದಲ್ಲಿ ನಗರದ ಬಾಲಕ ಕೆ.ಎಂ. ಗಣೇಶ ಚಿನ್ನದ ಪದಕ ಗಳಿಸಿದ್ದಾನೆ. 

ಫೈಟಿಂಗ್ ವಿಭಾಗದಲ್ಲಿ ಕಂಚಿನ ಪದಕವನ್ನು ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ. ಗಣೇಶ್, ಸ್ಥಳೀಯ ಆಯುರ್ವೇದ ವೈದ್ಯರಾದ ಪ್ರೊ. ಡಾ. ಎಚ್.ಬಿ. ಮೋಹನ್ ಮತ್ತು ಚೈತ್ರಾ ಮೋಹನ್ ದಂಪತಿಯ ಪುತ್ರ. ಕ್ರೀಡಾಪಟುವಿಗೆ ಡಾ. ಗುರುರಾಜ ಇಟಗಿ ತರಬೇತುದಾರರಾಗಿದ್ದಾರೆ.

ಗಣೇಶ್‌ ಸಾಧನೆಗೆ ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!