ನಗರಕ್ಕೆ ಅನುದಾನ: ಸಿಎಂ ಸಕಾರಾತ್ಮಕ ಸ್ಪಂದನೆ

ನಗರಕ್ಕೆ ಅನುದಾನ: ಸಿಎಂ ಸಕಾರಾತ್ಮಕ ಸ್ಪಂದನೆ

ರುದ್ರಭೂಮಿಯಲ್ಲಿ ಇಂದು ಸ್ವಚ್ಛತಾ ಆಂದೋಲನ

ದೀಪಾವಳಿ ಅಂಗವಾಗಿ ಹಿರಿಯರ ಹಬ್ಬ ಆಚರಣೆ ಪ್ರಯುಕ್ತ ಹಿಂದೂ ರುದ್ರಭೂಮಿಯಲ್ಲಿ ಇಂದು ಬೆಳಗ್ಗೆ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ನಗರದ ಸಂಘ ಸಂಸ್ಥೆಗಳು ಸ್ವ-ಇಚ್ಛೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಬಹುದು ಎಂದು ಪಾಲಿಕೆ ಮೇಯರ್‌ ಚಮನ್‌ ಸಾಬ್‌ ಮತ್ತು ಸದಸ್ಯ ಎ. ನಾಗರಾಜ್‌ ತಿಳಿಸಿದರು.

ನಗರದ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮನೆಯ ಮುಂದೆ ಹಾಗೂ ರಸ್ತೆಗಳಲ್ಲಿ ವ್ಯರ್ಥ ಇಟ್ಟಿಗೆ ತುಂಡು, ಅನುಪಯುಕ್ತ ವಸ್ತು ಹಾಗೂ ಚೀಲಗಳಲ್ಲಿ ಕಟ್ಟಿಟ್ಟ ವಸ್ತುಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ಇದನ್ನು ತೆಗೆಸಿದರೆ ನಗರವು ಶೇ.25ರಷ್ಟು ಸ್ವಚ್ಛವಾಗಲಿದೆ ಎಂದರು.

ಬೀದಿ ದೀಪಗಳ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ ಅವರು, ರುದ್ರಭೂಮಿಯಲ್ಲಿನ ಅವ್ಯವಸ್ಥೆಯ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗ್ಗೆ ಕ್ರಮ ಕೈ ಗೊಳ್ಳುವುದಾಗಿ ಮೇಯರ್‌ ಚಮನ್‌ ಸಾಬ್‌ ಹೇಳಿದರು.

ದಾವಣಗೆರೆ, ಅ.30- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರದ ಅಭಿವೃದ್ಧಿಗಾಗಿ ಕೆಲವು ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪಾಲಿಕೆ ಮೇಯರ್‌ ಕೆ. ಚಮನ್‌ ಸಾಬ್‌ ತಿಳಿಸಿದರು.

ಪಾಲಿಕೆಯ ಮೇಯರ್‌ ಕೊಠಡಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಭೆ ನಿಮಿತ್ತಾ ಬೆಂಗಳೂರಿಗೆ ಹೋದಾಗ ಮಂಗಳವಾರ ಶಕ್ತಿ ಭವನ ದಲ್ಲಿ ನಗರದ ಜ್ವಲಂತ ಸಮಸ್ಯೆ ಹಾಗೂ ಅಭಿವೃದ್ಧಿ ಗಾಗಿ 8 ಅಂಶಗಳ ಪ್ರಸ್ತಾವನೆ ಯನ್ನು ಚರ್ಚಿಸಿದ್ದೇವು ಎಂದು ಹೇಳಿದರು.

ಪಾಲಿಕೆ ಸದಸ್ಯ ಎ. ನಾಗರಾಜ್‌ ಮಾತನಾಡಿ, ಇಲ್ಲಿನ ಶಾಸಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ನೇತೃತ್ವದಲ್ಲಿ ನಗರದಲ್ಲಿ ಅಭಿವೃದ್ಧಿ ಪರ್ವವೇ ನಡೆಯುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಪಾಲಿಕೆಯಲ್ಲಿ ತೆರೆದ ನೂತನ ಹೆಲ್ಪ್ ಡೆಸ್ಕ್‌ ಅನ್ನು ಮೇಯರ್‌ ಚಮನ್‌ ಸಾಬ್‌ ಉದ್ಘಾಟಿಸಿದರು. ಈ ವೇಳೆ ಉಪ ಮೇಯರ್‌ ಸೋಗಿ ಶಾಂತಕುಮಾರ್‌, ಪಾಲಿಕೆ ಸದಸ್ಯರಾದ ಗಡಿಗುಡಾಳ್‌ ಮಂಜುನಾಥ್‌, ಎ. ನಾಗರಾಜ್‌, ಕಾಂಗ್ರೆಸ್‌ ಮುಖಂಡ ಉಮೇಶ್‌ ಮತ್ತಿತರರಿದ್ದರು.

error: Content is protected !!