ಹರಪನಹಳ್ಳಿ, ಅ.29- ತಾಲ್ಲೂಕಿನ ಅಡವಿಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ನವದೆಹಲಿ ವತಿಯಿಂದ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಹರಪನಹಳ್ಳಿ ಉತ್ತರ ಕ್ಲಸ್ಟರ್ ಸಿಆರ್‌ಪಿಗಳಾದ ಸಲೀಂ, ಸಮುದಾಯತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಕ ಶಿಕ್ಷಕರಾದ ಪರಸಪ್ಪ, ಶಿಕ್ಷಕರುಗಳಾದ ಸಿದ್ದೇಶ್ವರ ಗೌಡ, ಎಂ. ರಮೇಶ್, ಆರ್. ಪುಷ್ಪಾವತಿ, ಗ್ರಾಮದ ಮುಖಂಡರಾದ ಮಟ್ಟಿ ಹನುಮಂತಪ್ಪ, ಮಂಜುನಾಥ ಸ್ವಾಮಿ, ಕೊಟ್ರಜ್ಜ, ಭರಮರೆಡ್ಡಿ, ಸಿದ್ದಪ್ಪ, ಹಾಲೇಶ್ ಸೇರಿದಂತೆ ಇತರರಿದ್ದರು.
October 31, 2024