ಕೆರೆಗಳ ಸಂಖ್ಯೆ ಹೆಚ್ಚಿಸುವಂತೆ ಸಚಿವರಿಗೆ ಮನವಿ

ದಾವಣಗೆರೆ, ಅ.30- ಜಿಲ್ಲೆಯಲ್ಲಿ ಕೆರೆಗಳು ಅಲ್ಪ ಪ್ರಮಾಣದಲ್ಲಿವೆ. ಹಾಗಾಗಿ ಅವುಗಳ ಸಂಖ್ಯೆ ಹೆಚ್ಚಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರಿಗೆ ನೆಲ-ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿ ಒಕ್ಕೂಟ ಮನವಿ ಸಲ್ಲಿಸಿದೆ.

ಜಿಲ್ಲೆಯಲ್ಲಿ ನೀರನ್ನು ಕ್ರೋಢೀಕರಿಸಲು ಕೇವಲ 527 ಕೆರೆಗಳಿವೆ. ಹಾಗಾಗಿಯೇ ಜಿಲ್ಲೆಯ ಜನ ಬೇಸಿಗೆಯಲ್ಲಿ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ತಪ್ಪಿಸಲು ಕೆರೆಗಳ ಸಂಖ್ಯೆ ದ್ವಿಗುಣಗೊಳಿಸುವ ಜತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಪ್ರತ್ಯೇಕ ಅನುದಾನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಜಿಲ್ಲೆಗೆ 1 ಸಾವಿರಕ್ಕೂ ಅಧಿಕ ಕೆರೆಗಳ ಅವಶ್ಯವಿದೆ. ಆದ್ದರಿಂದ ಹೊಸ ಕೆರೆಗಳನ್ನು ನಿರ್ಮಿಸಲು ಮುಂದಾಗಬೇಕು ಮತ್ತು ಇರುವ ಕೆರೆಗಳ ಹೂಳು ತೆಗೆಸಲು ಮುಂದಾಗಬೇಕು ಎಂದಿದ್ದಾರೆ.

ಹೊಸ ಕೆರೆಗಳ ನಿರ್ಮಾಣಕ್ಕೆ ಸರ್ಕಾರಿ ಜಾಗಗಳನ್ನು ಗುರುತಿಸಿ, ಅವುಗಳ ನಿರ್ಮಾಣಕ್ಕೆ ಸುಮಾರು 500 ಕೋಟಿ ಹಣ ಮೀಸಲಿಡಬೇಕೆಂದಿದ್ದಾರೆ.

ಹರಿಹರ ತಾಲ್ಲೂಕು, ಭೈರನಪಾದ ಬ್ಯಾರೇಜನ್ನು 600 ರಿಂದ 700 ಅಡಿ ಅಗಲ, 15 ಅಡಿ ಎತ್ತರ, 3 ಕಿ.ಮೀ ಉದ್ದದಲ್ಲಿ ಯಾವುದೇ ಭೂಸ್ವಾಧೀನವಿಲ್ಲದೆ ನಿರ್ಮಿಸಿದರೇ ಸುಮಾರು 17 ಟಿ.ಎಂ.ಸಿ. ನೀರನ್ನು ಶೇಖರಿಸಬಹುದು. ಇದರಿಂದ ಬೇಸಿಗೆಯಲ್ಲಿ ನೀರಿನ ಬವಣೆಯನ್ನೂ ತಪ್ಪಿಸಬಹುದಾಗಿದೆ.

error: Content is protected !!