ಹೊನ್ನಾಳಿ, ಅ. 28 – ದಾವಣಗೆರೆ ಜಿಲ್ಲಾ ಬಿಜೆಪಿ ಪಕ್ಷವು ಮೊಬೈಲ್ ನೊಂದಣಿಯ ಮೂಲಕ ಹಮ್ಮಿಕೊಂಡಿರುವ ಸದಸ್ಯತ್ವದ ಅಭಿ ಯಾನವು ಅ. 30ರ ನಿಗದಿತ ದಿನದ ಒಳಗಾಗಿ 1 ಲಕ್ಷದ 20 ಸಾವಿರ ಗುರಿ ತಲುಪಲಿದೆ ಎಂದು ಜಿಲ್ಲಾ ಲೋಕಸಭಾ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.
ಹೊನ್ನಾಳಿ ತಾಲ್ಲೂಕು ಯಕ್ಕನಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ಹೊನ್ನಾಳ್ಳಿ ತಾಲ್ಲೂಕು ಮಂಡಲದ ಮಾಜಿ ಅಧ್ಯಕ್ಷ ಅರಕೆರೆ ಎ.ಬಿ. ಹನುಮಂತಪ್ಪ ಇವರ ನೇತೃತ್ವದಲ್ಲಿ ಇಂದು ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇಂದು ನ್ಯಾಮತಿ ತಾಲ್ಲೂಕು ಹಾಗೂ ಹೊನ್ನಾಳಿ ತಾಲ್ಲೂಕಿನ ಕುಂಬಳೂರು, ನೆಲಹೊನ್ನೆ ಗ್ರಾಮದ ನಂತರ ಯಕ್ಕನಹಳ್ಳಿ ಗ್ರಾಮದಲ್ಲಿ ಸದಸ್ಯತ್ವಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಅ. 30ಕ್ಕೆ ದಾವಣಗೆರೆ ಉತ್ತರ 75 ಸಾವಿರ, ದಕ್ಷಿಣ 60, ಚನ್ನಗಿರಿ 75, ಹರಿಹರ 70, ಹೊನ್ನಾಳಿ 60, ಮಾಯಕೊಂಡ 60 ಸಾವಿರ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 4,60,000 ನೋಂದಣಿಯ ಸದಸ್ಯತ್ವದ ಸಾಧನೆ ಗುರಿ ನೀಡಲಾಗಿದ್ದಿತು.
ಅ. 24ರಲ್ಲಿ ಸದಸ್ಯತ್ವ ಮಾಡಿದ ಮಾಹಿತಿಯ ಪ್ರಕಾರ ದಾವಣಗೆರೆ ದಕ್ಷಿಣ 21 ಸಾವಿರ, ಉತ್ತರ 8, ಮಾಯಕೊಂಡ 7, ಚನ್ನಗಿರಿ 18, ಹೊನ್ನಾಳಿ 21, ಹರಿಹರ 4, ಜಗಳೂರು 9 ಸಾವಿರ ಸೇರಿದಂತೆ 91,000 ಸದಸ್ಯತ್ವದ ಗುರಿಯನ್ನು ತಲುಪಲು ಪಕ್ಷದ ಎಲ್ಲಾ ಕಾರ್ಯಕರ್ತರ ಸಹಕಾರದಿಂದ ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಅರಕೆರೆ ಎ.ಬಿ. ಹನುಮಂತಪ್ಪ, ಶಾಂತರಾಜ ಪಾಟೀಲ್, ಕೆ.ವಿ. ಚೆನ್ನಪ್ಪ, ದಾವಣಗೆರೆ ಜಯಕ್ಕ, ನೆಲಹೊನ್ನೆ ದೇವರಾಜ್, ಯಕ್ಕನಹಳ್ಳಿ ಜಗದೀಶ್ ದೇವಣ್ಣ, ಗ್ರಾಮದ ಮುಖಂಡರಾದ ಆನಂದಪ್ಪ, ಹಾಲೇಶಪ್ಪ, ಷಣ್ಮುಖಪ್ಪ, ಸಿದ್ದಣ್ಣ ಇನ್ನಿತರರಿದ್ದರು.