ಮಾಯಕೊಂಡ, ಅ.27- ಹಾನಿಗೊಳ ಗಾದ ಕೆರೆ ಏರಿಯನ್ನು ಸ್ವತಃ ಕುರ್ಕಿ ಗ್ರಾಮಸ್ಥರೇ ದುರಸ್ತಿ ಮಾಡಿ ಕಾಳಜಿ ಮೆರೆದಿದ್ದಾರೆ.
ತಾಲ್ಲೂಕಿನ ಕುರ್ಕಿ ಗ್ರಾಮದ ಕೆರೆ ಏರಿಯಲ್ಲಿ ಬಸಿಯುವಿಕೆಯಿಂದಾಗಿ ನೀರು ಪೋಲಾಗುತ್ತಿತ್ತು. ಮೂರು ವರ್ಷದ ಹಿಂದೆ ಇಲಾಖೆಯ ಎಂಜಿನಿಯರ್ಗಳು ದುರಸ್ತಿ ಮಾಡಿದ ಬಳಿಕವೂ ನೀರು ಪೋಲಾಗುವುದು ಸಂಪೂರ್ಣ ನಿಂತಿರಲಿಲ್ಲ.
ಇದನ್ನು ಗಮನಿಸಿದ ಗ್ರಾಮಸ್ಥರೇ ಕೆರೆಯ ಏರಿಯಲ್ಲಿ ಬೋನು ಬಿದ್ದ, ಜಾಗವನ್ನು ಪತ್ತೆಹಚ್ಚಿದರು. ಎಂಜಿನಿಯರ್, ಅಧಿಕಾರಿಗಳ ನೆರವು ಕಾಯದೇ ಕಪ್ಪುಮಣ್ಣು, ಗ್ರಾವೆಲ್ ಭರ್ತಿ ಮಾಡಿ ಏರಿ ದುರಸ್ತಿ ಮಾಡಿದ್ದಾರೆ. ಈಗ ನೀರು ಬಸಿಯುವುದು ಪೂರ್ಣ ನಿಂತಿದೆ.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಜಿ. ನಂದ್ಯಪ್ಪ, ಗ್ರಾ. ಪಂ. ಮಾಜಿ ಸದಸ್ಯ ವೀರೇಂದ್ರಚಾರಿ, ರಮೇಶ, ರವೀಂದ್ರ, ಅಜ್ಜಯ್ಯ, ಮಂಜುನಾಥ, ನಾಗರಾಜ, ಕಲ್ಲಳ್ಳಿ ವೀರಣ್ಣ, ವಿಜಯಕುಮಾರ್, ಸಿದ್ದಯ್ಯ, ಜಿ.ಡಿ. ರಂಗಪ್ಪ, ಕಲ್ಲಳ್ಳಿ ಆನಂದ್ ಮತ್ತು ಗ್ರಾಮಸ್ಥರು ಇದ್ದರು.