ಓಬಿಸಿ ಪಟ್ಟಿಯಲ್ಲಿ `ಸ್ವಕುಳಸಾಳಿ’ ಪದ ತಪ್ಪು ಸರಿಪಡಿಸಲು ಮನವಿ

ಓಬಿಸಿ ಪಟ್ಟಿಯಲ್ಲಿ `ಸ್ವಕುಳಸಾಳಿ’ ಪದ ತಪ್ಪು ಸರಿಪಡಿಸಲು ಮನವಿ

ದಾವಣಗೆರೆ, ಅ.25- ಈಗಾಗಲೇ ಮುದ್ರಣ ಗೊಂಡಿರುವ ಓಬಿಸಿ ಪಟ್ಟಿಯಲ್ಲಿ `ಸ್ವಕುಳಸಾಳಿ’ ಜಾತಿ ಪದ ತಪ್ಪಾಗಿದ್ದು, ಅದನ್ನು ಸರಿಯಾಗಿ ಮುದ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ವಕುಳಸಾಳಿ ಸಮಾಜವು ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರಿಗೆ ಮನವಿ ಸಲ್ಲಿಸಿದೆ.

`ಸ್ವಕುಳಸಾಳಿ’  ಜಾತಿ ಪದ ತಪ್ಪಾಗಿರುವ ಹಿನ್ನೆಲೆಯಲ್ಲಿ ಈ ಸಮಾಜವು ಕೇಂದ್ರ ಸರ್ಕಾರದ ಶೈಕ್ಷಣಿಕ ಮತ್ತು ಉದ್ಯೋಗ ಸೌಲಭ್ಯ ಪಡೆಯುವಲ್ಲಿ  ಸ್ವಕುಳಸಾಳಿ ಸಮಾಜದ ವಿದ್ಯಾರ್ಥಿಗಳಿಗೆ ಅನ್ಯಾ ಯವಾಗುತ್ತಿದೆ ಎಂದು ನಿವೃತ್ತ ಪೊಲೀಸ್ ವರಿಷ್ಠಾ ಧಿಕಾರಿಯೂ ಆಗಿರುವ ಸ್ವಕುಳಸಾಳಿ ಸಮಾಜದ ರಾಜ್ಯಾಧ್ಯಕ್ಷ ಚಂದ್ರಕಾಂತ ಭಂಡಾರೆ ತಿಳಿಸಿದ್ದಾರೆ.

ಈಗ ಮುದ್ರಣಗೊಂಡಿರುವ ಓಬಿಸಿ ಪಟ್ಟಿಯಲ್ಲಿ Sakulasali ಯನ್ನು Swakulasale; Swakulasali (ಸ್ವಕುಳಸಾಳಿ) ಎಂದು ಸರಿಪಡಿಸಿ  ಮುದ್ರಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅವರಿಗೆ ಭಂಡಾರೆ ಅವರು ಮನವರಿಕೆ ಮಾಡಿಕೊಟ್ಟರು. ಮನವಿಗೆ ಸ್ಪಂದಿಸಿದ ಸಂಸದರು ಸರಿಪಡಿಸಿಕೊಡುವ ಭರವಸೆ ನೀಡಿದರು.

`ಸ್ವಕುಳಸಾಳಿ ವಾರ್ತೆ’ ಪತ್ರಿಕೆಯನ್ನು ಸಂಸದರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸ್ವಕುಳಸಾಳಿ ಸಮಾಜದ ಮುಖಂಡರೂ ಆಗಿರುವ ಬಿಜೆಪಿ ಮುಖಂಡ ಸುರೇಶ್ ಚಿಲ್ಲಾಳ್ ಉಪಸ್ಥಿತರಿದ್ದರು. 

error: Content is protected !!