ದಾವಣಗೆರೆ, ಅ.25- ರಾಜ್ಯದಲ್ಲಿ ಕೋಟ್ಯಾಂತರ ಜನ ಅಸಂಘಟಿತ ವಲಯದಲ್ಲಿದ್ದಾರೆ. ಅವರೆಲ್ಲರೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಹೇಳಿದರು.
ನಗರದ ಕೆ.ಆರ್ ಮಾರುಕಟ್ಟೆಯ ಬೀದಿಬದಿ ವ್ಯಾಪಾರಸ್ಥರ ಕಚೇರಿಯಲ್ಲಿ ಸೋಮವಾರ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೀದಿಬದಿ ವ್ಯಾಪಾರಸ್ಥರ ಸಂಘದ ಸಲಹೆಗಾರ ಮಂಜುನಾಥ್ ಕೈದಾಳೆ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ನಿತ್ಯವೂ ಸರ್ಕಾರಕ್ಕೆ ಅಧಿಕ ಸುಂಕ ಕಟ್ಟುತ್ತಿದ್ದಾರೆ. ಇದೇ ಹಣದಲ್ಲಿ ಕಲ್ಯಾಣ ಮಂಡಳಿಯನ್ನು ನಿರ್ಮಿಸುವ ಮೂಲಕ ಬಡ ವ್ಯಾಪಾರಸ್ಥರಿಗೆ ವಿವಿಧ ಸೌಲಭ್ಯ ಒದಗಿಸಬೇಕೆಂದು ಕಾರ್ಮಿಕ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಸಾಬ್, ಗೌರವಾಧ್ಯಕ್ಷ ರಹಮತ್ ವುಲ್ಲಾ, ಜಿಲ್ಲಾ ಸಮಿತಿಯ ಕೃಷ್ಣಮೂರ್ತಿ, ಮಂಜುಳಮ್ಮ, ಶೀಲಮ್ಮ, ಅನೀಲ್ ಹಾಗೂ ಬೀದಿ ಬದಿ ವ್ಯಾಪಾರಸ್ಥರಿದ್ದರು.