ಹರಿಹರ, ಅ. 25 – ತಾಲ್ಲೂಕಿನ ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಪದವಿ ಪೂರ್ವ ವಿಭಾಗ ಮತ್ತು ಪ್ರೌಢ ಶಾಲೆಯಲ್ಲಿ ಈಚೆಗೆ 9ನೇ ರಾಷ್ಟ್ರೀಯ ಆಯುರ್ವೇದ ದಿನ ಹಾಗೂ ನಾರಿ ಸ್ವಾಸ್ಥ್ಯ ಮತ್ತು ಸಬಲೀಕರಣಕ್ಕಾಗಿ ಆಯುರ್ವೇದ ಸಪ್ತಾಹದ ನಿಮ್ಮಿತ್ತ್ಯ 12ರಿಂದ 21 ವಯಸ್ಸಿನ ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಆಯುರ್ವೇದದ ಪಾತ್ರ ಎಂಬ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ವೇಳೆ ಶಾಲಾ ಮುಖ್ಯ ಶಿಕ್ಷಕ ವಿ.ಬಿ. ಕೊಟ್ರೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು.ಬಿ. ಯೋಗೇಂದ್ರ ಕುಮಾರ್, ಉಪ ಮುಖ್ಯ ವೈದ್ಯಾಧಿಕಾರಿ ಡಾ.ಎನ್.ಎಸ್. ಸುಚಿತ್ರಾ, ಹಿರಿಯ ವೈದ್ಯಾಧಿಕಾರಿ ಡಾ.ಎಂ.ಸಿ. ಸುರೇಶ್ ಕುಮಾರ್, ಬಿ.ಎಂ. ಶಿವಲಿಂಗಯ್ಯ, ಶಿಕ್ಷಕ ನಾಗರಾಜ್ ಇದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆಯುಷ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.