ಸೊರಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಯಾಣಿ ಮರಿಯಪ್ಪ

ಸೊರಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಯಾಣಿ ಮರಿಯಪ್ಪ

ಹೊನ್ನಾಳಿ, ಅ. 25 – ತಾಲ್ಲೂಕಿನ ಸೊರಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ. ಕಲ್ಯಾಣಿ ಮರಿಯಪ್ಪ ಇವರು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಚುನಾವಣಾಧಿಕಾರಿ ಡಾ. ವಿಶ್ವನಟೇಶ್ ಘೋಷಿಸಿದರು.

ಹಿಂದಿನ ಅಧ್ಯಕ್ಷರಾಗಿದ್ದ ಪರಶುರಾಮರಾಮ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬೇರೆ ಸದಸ್ಯರು ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಕೆ. ಕಲ್ಯಾಣಿ ಮರಿಯಪ್ಪ ಅವರು ಶುಕ್ರವಾರ ಅಧ್ಯಕ್ಷರಾಗಿ ಆಯ್ಕೆಗೊಂಡರು.

ಈ ಸಂದರ್ಭದಲ್ಲಿ ಶಾಸಕ ಡಿ.ಜಿ. ಶಾಂತನಗೌಡ, ಕಾಂಗ್ರೆಸ್ ಮುಖಂಡ ಹೆಚ್.ಬಿ. ಮಂಜಪ್ಪ, ಹೆಚ್.ಎ. ಉಮಾಪತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ. ಬಸವನಗೌಡ ಪಾಟೀಲ್, ಉಪಾಧ್ಯಕ್ಷೆ ರಾಧಮ್ಮ, ಸದಸ್ಯರಾದ ವಿರೂಪಾಕ್ಷಪ್ಪ, ಹನುಮಂತಪ್ಪ, ಮರಿಯಪ್ಪ, ರಾಧಮ್ಮ, ನಾಗರತ್ನಬಾಯಿ, ಕೆಂಚಮ್ಮ, ರಂಜಿತಾ, ಸುಮಾ, ಪಿಡಿಒ ಎನ್. ನಾಗರಾಜ್, ಕಾರ್ಯದರ್ಶಿ ಹಳದಪ್ಪ ಗ್ರಾಮದ ಮುಖಂಡ ಶಿವನಗೌಡ, ಎಂ. ಬಸವಣ್ಯಪ್ಪ, ಚಂದ್ರಪ್ಪ ಮಾಸ್ಟರ್, ಒ. ಹನುಮಪ್ಪ, ಎನ್. ನಾಗೇಶ್‍ರಾವ್, ಕೆ.ಬಿ. ರಾಮನಗೌಡ ಇನ್ನಿತರರಿದ್ದರು.

error: Content is protected !!