ಮಲೇಬೆನ್ನೂರು, ಅ.23- ಕೊಕ್ಕನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಹಳ್ಳಿಹಾಳ್ ಗ್ರಾಮದ ಶ್ರೀಮತಿ ಗೌರಮ್ಮ ಟಿ.ಎಂ. ಧರ್ಮರಾಜ್ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಕೊಕ್ಕನೂರಿನ ಶ್ರೀಮತಿ ಹುಲಿಗೆಮ್ಮ ಗೋವಿಂದಪ್ಪ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಹರಿಹರ ತಾ.ಪಂ. ಇಓ ಸುಮಲತಾ ಅವರು ಚುನಾವಣಾಧಿಕಾರಿಯಾಗಿದ್ದರು.
ಗ್ರಾ.ಪಂ. ಉಪಾಧ್ಯಕ್ಷ ಉಕ್ಕಡಗಾತ್ರಿ ಮಂಜುನಾಥ್, ಗ್ರಾಮದ ಮುಖಂಡರಾದ ಓ.ಬಸವನಗೌಡ, ಅಂಗಡಿ ಧರ್ಮಣ್ಣ, ಕೆ.ಪಿ. ಆಂಜನೇಯ ಪಾಟೀಲ್, ಅಭಿನಂದನ್ ಪಾಟೀಲ್, ಓ. ನಿಂಗನಗೌಡ, ಹಳ್ಳಿಹಾಳ್ ಗ್ರಾಮದ ಮುಖಂಡರಾದ ಹೆಚ್.ಟಿ. ಪರಮೇಶ್ವರಪ್ಪ, ಯು.ಎನ್. ಶಿವನಗೌಡ, ಹಾಲಿವಾಣದ ಈರನಗೌಡ, ಮಾಳಗಿ ತಿಮ್ಮನಗೌಡ ಡಿ. ಕೃಷ್ಣಮೂರ್ತಿ, ಹೆಚ್.ಎಸ್. ಉಮೇಶ್ ಹೆಚ್.ನಿಂಗರಾಜ್, ತಳವಾರ್ ಭೀಮಪ್ಪ ಮತ್ತು ನಿಟುವಳ್ಳಿಯ ಮಾಳಗಿ ಕರಿಯಪ್ಪ ಸೇರಿದಂತೆ ಗ್ರಾ.ಪಂ. ಸದಸ್ಯರು ಈ ವೇಳೆ ಹಾಜರಿದ್ದರು.