ಹರಪನಹಳ್ಳಿ, ಅ.23- ಮಂಡ್ಯದಲ್ಲಿ ಬರುವ ಡಿಸೆಂಬರ್ 20ರಿಂದ ಮೂರು ದಿನಗಳವರೆಗೆ ನಡೆಯಲಿ ರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ್ಯ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥವು ಇಂದು ಹರಪನಹಳ್ಳಿಗೆ ಆಗಮಿಸಿತು.
ರಥಕ್ಕೆ ಹರಪನಹಳ್ಳಿ ತಾಲ್ಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ತಾಲ್ಲೂಕಿನ ಗಡಿಭಾಗ ಕಾನಹಳ್ಳಿಯಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಕೂಲಹಳ್ಳಿ ಮಾರ್ಗವಾಗಿ ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ತಹಶೀಲ್ದಾರ್ ಗಿರೀಶ್ಬಾಬು, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಮಾಜಿ ಅಧ್ಯಕ್ಷರಾದ ಎಚ್.ಮಲ್ಲಿಕಾರ್ಜುನ, ಕಾರ್ಯದರ್ಶಿ ಜಿ. ಮಹಾದೇವಪ್ಪ, ಖಜಾಂಚಿ ಕೆ.ರಾಘವೇಂದ್ರ ಶೆಟ್ಟಿ, ಕ.ರ.ವೇ. ತಾಲ್ಲೂಕು ಅಧ್ಯಕ್ಷ ಗಿರಜ್ಜಿ ನಾಗರಾಜ್, ನಂದೀಶ ಆಚಾರಿ, ಕೆ.ನಂದೀಶ್, ಅಶೋಕ್, ಸಾಹಿತಿ ಮಾಡ್ಲಗೇರಿ ಸುಭದ್ರಮ್ಮ, ಪ್ರಭಾವತಿ ಕೃಷ್ಣಪ್ಪ, ಇಸ್ಮಾಯಿಲ್ ಎಲಿಗಾರ್, ಪೂಜಾರ್ ಬಸವರಾಜ್, ಜಿಟ್ಟಿನಕಟ್ಟಿ ಎಚ್.ಕೆ.ಮಂಜುನಾಥ್, ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ, ಲಾಟಿ ದಾದಾಪೀರ್, ಉದ್ದಾರ್ ಗಣೇಶ, ಜಾಕೀರ್, ಟಿ.ವೆಂಕಟೇಶ್, ಮುಖಂಡರಾದ ಚಿಕ್ಕೇರಿ ಬಸಪ್ಪ, ಅರಸಿಕೇರಿ ಜಾವೀದ್, ಪ್ರಕಾಶಗೌಡ್ರು, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಇಬ್ರಾಹಿಂ ಸಾಬ್, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಲೇಪಾಕ್ಷಪ್ಪ ಸೇರಿದಂತೆ ಇತರರು ಇದ್ದರು.