ಹೊನ್ನಾಳಿ, ಅ.22- ಕುಂದೂರು ಗ್ರಾ.ಪಂ. ಅಧ್ಯಕ್ಷರಾಗಿ ವಿ.ಮಂಜುಳಾ ಮಲ್ಲಿಕಾರ್ಜುನ ಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎ.ಕೆ ನಾಗೇಂದ್ರಪ್ಪ ಮಾಹಿತಿ ತಿಳಿಸಿದರು.
ಹಿಂದಿನ ಅಧ್ಯಕ್ಷೆ ರತ್ನಮ್ಮ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇತರೆ ಸದಸ್ಯರಾರೂ ಉಮೇದುವಾರಿಕೆ ಸಲ್ಲಿಸದ ಕಾರಣ ಸಾಮಾನ್ಯ ವರ್ಗ ಮಹಿಳಾ ಕ್ಷೇತ್ರಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ವಿ.ಮಂಜುಳಾ ಅವರನ್ನು ಆಯ್ಕೆ ಮಾಡಲಾಯ್ತು ಎಂದು ಮಾಹಿತಿ ನೀಡಿದರು.
ಚುನಾವಣಾ ಸಂದರ್ಭದಲ್ಲಿ 14 ಜನ ಸದಸ್ಯರ ಪೈಕಿ 4 ಜನ ಸದಸ್ಯರು ಗೈರು ಹಾಜರಾಗಿದ್ದರು. ಮಂಜುಳಾ ಅವರು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಸೊಸೆ.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷರಾದ ರಹಮತ್ ಉಲ್ಲಾ ಖಾನ್, ಮಾಜಿ ಅಧ್ಯಕ್ಷೆ ರತ್ನಮ್ಮ, ಸದಸ್ಯರಾದ ಎನ್.ಜಿ.ರೇಖಾ, ಸಿ.ಆಂಜನೇಯ, ಎಸ್.ಆರ್.ಪ್ರಸನ್ನಕುಮಾರ್, ಸುರೇಶ್, ಎಸ್.ಧನಂಜಯ, ಬಿ.ಎಂ.ಲತಾ, ಜಿ.ಯು.ಉದಯಕುಮಾರ್, ಪಿಡಿಒ ವಿಜಯಗೌಡ, ಕಾರ್ಯದರ್ಶಿ ವೀರೇಂದ್ರ, ಮುಖಂಡರಾದ ಬಿ.ಜಿ.ಶಿವಕುಮಾರ್, ಜಯಪ್ಪಗೌಡ, ಗುರುರಾಜ ಪಾಟೀಲ್, ಪರಮೇಶ್ವರಪ್ಪ, ತಿಪ್ಪೇಶಪ್ಪ, ಎಂ.ಪಿ.ಮಲ್ಲಿಕಾರ್ಜುನಸ್ವಾಮಿ, ಎಂ.ಪಿ.ರಾಜು, ರಾಜುಗೌಡ, ಎಂ.ಟಿ.ಹಾಲೇಶ್ ಮತ್ತಿತರರು ಉಪಸ್ಥಿತರಿದ್ದರು.