ಮಳೆಯಿಂದ 31.25 ಲಕ್ಷ ರೂ. ಹಾನಿ

ದಾವಣಗೆರೆ, ಅ. 22 – ಜಿಲ್ಲೆಯಲ್ಲಿ ಸೋಮವಾರ 15.4 ಮಿ.ಮೀ. ಮಳೆಯಾಗಿದ್ದು, 31.25 ಲಕ್ಷ ರೂ.ಗಳ ನಷ್ಟವಾಗಿದೆ.

ಸೋಮವಾರದಂದು ಚನ್ನಗಿರಿ ತಾಲ್ಲೂಕಿನಲ್ಲಿ 11.1 ಮಿ.ಮೀ., ದಾವಣಗೆರೆಯಲ್ಲಿ 20.2 ಮಿ.ಮೀ., ಹರಿಹರದಲ್ಲಿ 10.2 ಮಿ.ಮೀ., ಹೊನ್ನಾಳಿಯಲ್ಲಿ 8.7 ಮಿ.ಮೀ., ಜಗಳೂರಿನಲ್ಲಿ 22.3 ಮಿ.ಮೀ. ಹಾಗೂ ನ್ಯಾಮತಿಯಲ್ಲಿ 15.4 ಮಿ.ಮೀ. ಮಳೆಯಾಗಿದೆ.

12 ಪಕ್ಕಾ ಮನೆಗೆ ತೀವ್ರ ಹಾನಿ ಹಾಗೂ 22 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1 ಕಚ್ಚಾ ಮನೆಗೆ ತೀವ್ರ ಹಾಗೂ 30 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

error: Content is protected !!