ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜು ಆದ ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ವಿಟಿಯು ಮತ್ತು ಇ ಅಂಡ್ ಐ ವಿಭಾಗದ ಸಹಯೋಗದಲ್ಲಿ ವಿಟಿಯು ಕನ್ಸೋರ್ಟಿಯಮ್ ಇ – ರಿಸೋರ್ಸ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ವಿಟಿಯು ಸ್ಕಿಲ್ ಡೆವೆಲಪ್ಮೆಂಟ್ ಸೆಂಟರ್ನ ನಿರ್ದೇಶಕರಾದ ಡಾ.ಸಂಧ್ಯಾ ಆರ್.ಅವ್ನೇಕರ್, ವಿಶೇಷ ಆಹ್ವಾನಿತರಾಗಿ ವಿಟಿಯುನ ಲೈಬ್ರರಿಯನ್, ಸಹ ಸಂಯೋಜಕ ಸೋಮರಾಯ್ ಬಿ. ತಳ್ಳೊಳ್ಳಿ ಭಾಗವಹಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಪಿ. ನಾಗರಾಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.