ಈಶ್ವರಮ್ಮ ಟ್ರಸ್ಟ್‌ನ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಸಹಯೋಗದಲ್ಲಿ ಇಸ್ರೋ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಶ್ರೀ ಸತ್ಯ ಸಾಯಿ ವಿದ್ಯಾ ವಾಹಿನಿ, ಪುಟ್ಟಪರ್ತಿ ಇವರ ವತಿಯಿಂದ ಇಂದು ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆ ವರೆಗೆ ಇಸ್ರೋ ಆನ್ ವ್ಹೀಲ್ಸ್ ಸ್ಪೇಸ್ ಎಕ್ಸಿಬಿಷನ್ ಕಾರ್ಯಕ್ರಮವನ್ನು ಈಶ್ವರಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರದರ್ಶನದ ಉದ್ಘಾಟನೆಯನ್ನು ಡಿಡಿಪಿಐ ಜಿ.ಕೊಟ್ರೇಶ್ ಮತ್ತು ಜಿ.ಪಂ. ಸಿಇಓ ಸುರೇಶ್ ಇಟ್ನಾಳ್ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಇಸ್ರೋದ ಪಿವಿಎನ್ ಮೂರ್ತಿ, ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಪಾಲ್ಗೊಳ್ಳಲಿದ್ದಾರೆ.
ಈಶ್ವರಮ್ಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಸುಜಾತಾ ಕೃಷ್ಣ, ಟ್ರಸ್ಟ್ ಅಧ್ಯಕ್ಷೆ ಎ.ಆರ್.ಉಷಾ ರಂಗನಾಥ್, ಕಾರ್ಯದರ್ಶಿ ಜಿ.ಆರ್.ವಿಜಯಾನಂದ್, ಖಜಾಂಚಿ ಎ.ಪಿ.ಸುಜಾತಾ ಗೌರವ ಉಪಸ್ಥಿತರಿರುವರು.