ಹದಡಿಯಲ್ಲಿ ಲಯನ್ಸ್ ಕ್ಲಬ್‌ನಿಂದ ಹೃದಯ ಆರೋಗ್ಯ ತಪಾಸಣೆ ಶಿಬಿರ

ಹದಡಿಯಲ್ಲಿ ಲಯನ್ಸ್ ಕ್ಲಬ್‌ನಿಂದ ಹೃದಯ ಆರೋಗ್ಯ ತಪಾಸಣೆ  ಶಿಬಿರ

ದಾವಣಗೆರೆ, ಅ. 28 – ಹದಡಿ ಗ್ರಾಮದಲ್ಲಿ ಲಯನ್ಸ್ ಕ್ಲಬ್ (ದಾವಣಗೆರೆ), ಕನಕ ವಿವಿಧೋದ್ದೇಶಗಳ ಸಹಕಾರಿ ಸಂಘ ಹದಡಿ, ಎಸ್.ಎಸ್. ನಾರಾಯಣ ಹೆಲ್ತ್ ಸೆಂಟರ್ ಇವರ ಸಹಯೋಗದಲ್ಲಿ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳವಯ್ಯ ವಹಿಸಿದ್ದರು. ಕನಕ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎ.ಹೆಚ್. ನಾಗರಾಜ್ ಉದ್ಘಾಟಿಸಿದರು. ವೈದ್ಯ ಗುರುರಾಜ್ ಮಾತನಾಡಿ, ಹೃದಯ ಆರೋಗ್ಯ ಕುರಿತಾಗಿ ನಿರ್ವಹಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು. ದುಶ್ಚಟಗಳಿಂದ ದೂರವಿರಲು ಸಲಹೆ ನೀಡಿದರು. 

ಮುಖ್ಯ ಅತಿಥಿಗಳಾಗಿ ಶ್ರೀಮತಿ ಇಂದ್ರಮ್ಮ ದಳವಾಯಿ, ಆರ್.ಜಿ. ಶ್ರೀನಿವಾಸ್ ಮೂರ್ತಿ, ಎಂ.ಎಸ್. ಉದಯ್ ಕುಮಾರ್, ಬೆಳ್ಳೂಡಿ ಶಿವಕುಮಾರ್, ಖಜಾಂಚಿ  ಎಸ್. ನಾಗರಾಜ್, ಸಹ ಕಾರ್ಯದರ್ಶಿ ಹೆಚ್.ಎಂ. ನಾಗರಾಜ್, ವೆಂಕಟಾಚಲಂ ಆಗಮಿಸಿದ್ದರು. ಹೆಚ್.ಸಿ. ಹನುಮಂತಪ್ಪ ನಿರ್ವಹಿಸಿದರು. 

ಲಯನ್ಸ್ ಕಾರ್ಯದರ್ಶಿ ಅಜಯ್ ನಾರಾಯಣ್ ಪ್ರಾರ್ಥಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಡ್ಡಪ್ಪ ಕಾರ್ಯಕ್ರಮ ನಿರೂಪಿಸಿದರು. 

error: Content is protected !!