ದಾವ ಣಗೆರೆ, ಅ.21- ನಗರದ ಜೈನ್ ಇನ್‍ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಕಂಪ್ಯೂ ಟರ್ ಸೈನ್ಸ್ ಮತ್ತು ಇಂಜಿನಿ ಯರಿಂಗ್ ವಿಭಾ ಗವು ಎಐಸಿಟಿಇ ತರಬೇತಿ ಮತ್ತು ಕಲಿಕೆಯಿಂದ ಪ್ರಾಯೋಜಿಸಲ್ಪಟ್ಟ `ನೆಕ್ಸ್ಟ್-ಜೆನ್ ಸೈಬರ್ ಭದ್ರತೆ’, ರೆಸಿಲಿಯೆಂಟ್ ಡಿಜಿಟಲ್ ಭವಿಷ್ಯದ ಕಾರ್ಯತಂತ್ರಗಳ ಕುರಿತು ಫ್ಯಾಕಲ್ಟಿ ಡೆವಲಪ್‍ಮೆಂಟ್ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಅಟಲ್ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಎಐ ಮತ್ತು ಸೈಬರ್ ಸೆಕ್ಯುರಿಟಿ ಎಂಜಿಐ, ಯುಎಸ್ ಮೂಲದ ಬಹುರಾಷ್ಟ್ರೀಯ ಕಂಪನಿ ನಿರ್ದೇಶಕ ಡಾ. ಉದಯಶಂಕರ್ ಪುರಾಣಿಕ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು, ಕಾಲೇಜ್‌ನ ಪ್ರಾಂಶುಪಾಲ ಡಾ. ಗಣೇಶ್ ಡಿ.ಬಿ., ಡಾ. ಮೌನೇಶಚಾರಿ ಎಸ್,
ಡಾ. ನಿರಂಜನ್ ಮೂರ್ತಿ ಸಿ, ಡಾ. ಮಂಜಪ್ಪ ಸಾರಥಿ, ಡಾ. ಮುಸ್ತಫಾ ಬಸ್ತಿಕೋಡಿ, ಡಾ. ಅನಂತ್ ಪ್ರಭು ಗುರ್ಪುರ್, ಡಾ. ಅಶೋಕ್ ಕುಮಾರ್ ಎ.ಆರ್, ಡಾ. ಮೋಹಿತ್ ಪಿ. ತಹಿಲಿಯಾನಿ ಮತ್ತಿತರರು ಭಾಗವಹಿಸಿದ್ದರು.