ಮಲೇಬೆನ್ನೂರು, ಅ.20- ಜಿಗಳಿ ಗ್ರಾ.ಪಂ. ಕಚೇರಿ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಾಲ್ಮೀಕಿ ವೃತ್ತದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಜಯಶ್ರೀ ಅವರು ಮಾತನಾಡಿದರು.
ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ ಮಾತನಾಡಿ, ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ಧಾರಾವಾಹಿ ಮೂಲಕ ನೋಡಿದ್ದೇವೆ. ಅದೇ ರೀತಿ ಆ ಮಹಾಕಾವ್ಯಗಳನ್ನು ಓದುವ ಪ್ರಯತ್ನವನ್ನು ಎಲ್ಲರೂ ಮಾಡಬೇಕೆಂದರು.
ಪತ್ರಕರ್ತ ಪ್ರಕಾಶ್ ಮಾತನಾಡಿ, ರಾಮಾಯಣದ ಆದರ್ಶ, ಮೌಲ್ಯಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಕೂಡಾ ಆದರ್ಶವಾಗಬಹುದೆಂದರು.
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್, ಉಪಾಧ್ಯಕ್ಷ ಡಿ.ಎಂ.ಹರೀಶ್, ಸದಸ್ಯರಾದ ಹೋಬಳಿ ಆನಂದಗೌಡ, ಕೆ.ಜಿ.ಬಸವರಾಜ್, ಎಕ್ಕೆಗೊಂದಿ ಚೇತನ್, ಸಿ.ಎನ್.ಪರಮೇಶ್ವರಪ್ಪ, ಪೂಜಾರ್ ನಾಗರಾಜ್, ಬಿ.ಕೆ.ರಂಗನಾಥ್, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ದೇವೇಂದ್ರಪ್ಪ, ಎಸ್ಡಿಎಂಸಿ ಅಧ್ಯಕ್ಷ ಗಂಗಾಧರಚಾರಿ, ಮಾಜಿ ಅಧ್ಯಕ್ಷರಾದ ಜಿ.ಪಿ.ಹನುಮಗೌಡ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.